ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಚಿರತೆ ಹಾವಳಿಯಿಂದ ಬೆಚ್ಚಿದ್ದಾರೆ. ನಗರದ ಹಲವೆಡೆ ಚಿರತೆ ಕಾಣಿಸಿಕೊಂಡ ಪರಿಣಾಮ ಇಲ್ಲಿನ ಕ್ಯಾಂಪ್ ಪ್ರದೇಶದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇಲ್ಲಿನ ಹಿಂಡಲಗಾ ರಸ್ತೆಯಲ್ಲಿ ಇಂದು ಬೆಳಿಗ್ಗೆ ಚಿರತೆ ಮತ್ತೆ ಕಾಣಿಸಿಕೊಂಡಿದೆ. ರಾಜಾರೋಷವಾಗಿ ರಸ್ತೆ ಪಕ್ಕದಲ್ಲೇ ಓಡಾಡುತ್ತಿರುವುದನ್ನು ಖಾಸಗಿ ಬಸ್ ಸವಾರರು ಮೊಬೈಲಿನಲ್ಲಿ ವಿಡಿಯೊ ಮಾಡಿದ್ದಾರೆ ಇದರಿಂದ ಜನ ಬೆಚ್ಚಿದ್ದಾರೆ.
ಕಳೆದ ಶುಕ್ರವಾರವೂ ಚಿರತೆ ಕಾಣಿಸಿಕೊಂಡು ಶಾಲೆಗಳಿಗೆ ರಜೆ ನೀಡಲಾಗಿತ್ತು. ನಂತರ 100 ಪೊಲೀಸರು, 100 ಅರಣ್ಯ ಸಿಬ್ಬಂದಿ ಸೇರಿ 200 ಜನ ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದರು. ಬಡಿಗೆ ಹಿಡಿದುಕೊಂಡು ಕೂಗುತ್ತ, ಚೀರುತ್ತ, ಪಟಾಕಿ ಸಿಡಿಸುತ್ತ ಹೋದರು. 250 ಎಕರೆ ದಟ್ಟ ಪೊದೆ ಇರುವ ಈ ಪ್ರದೇಶವನ್ನು ಸುತ್ತಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಚಿರತೆ ಪತ್ತೆಯಾಗಿರಲಿಲ್ಲ.
ಇಂದು ಮತ್ತೆ ನಗರದೊಳಗೇ ಇರುವ ಗಾಲ್ಫ್ ಮೈದಾನದ ಪಕ್ಕದ ಹಿಂಡಲಗಾ ರಸ್ತೆಯಲ್ಲಿ ಎಡಬದಿಯಲ್ಲಿ ಮತ್ತೆ ಚಿರತೆ ಕಿಲೋಮೀಟರ್ ದೂರದವರೆಗೆ ಓಡಿದೆ. ಜನನಿಬಿಡ, ವಾಹನ ದಟ್ಟಣೆ ಇರುವ ಗಾಂಧಿ ಚೌಕದಿಂದ ಒಂದು ಕಿ.ಮೀ ದೂರ ಓಡಿದೆ. ನಂತರ ರಸ್ತೆಯ ಎಡಬದಿಯಿಂದ ಬಲಬದಿಗೆ ಹಾರಿ, ಗಾಲ್ಫ್ ಮೈದಾನದ ಪೊದೆ ಸೇರಿಕೊಂಡಿದೆ.
ಈ ರಸ್ತೆಯಲ್ಲಿ ಬರುತ್ತಿದ್ದ ಬಸ್ ನ ಚಾಲಕ ಚಿರತೆ ಕಂಡು ಅನುಮಾನ ಬಂದು ವಾಹನದ ವೇಗ ನಿಧಾನ ಮಾಡಿದರು. ಆಗ ಚಿರತೆ ವಾಹನದ ಹಿಂಬದಿಯಿಂದ ರಸ್ತೆ ದಾಟಿ ಎಡಬದಿಯಿಂದ ಅರಾಮವಾಗಿ ನಡೆಯತೊಡಗಿದೆ. ಇದನ್ನು ಬಸ್ ನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
Previous Articleಜೈಪುರ ಕ್ಯಾಸಿನೋದಲ್ಲಿ ಕರ್ನಾಟಕದ ಅಧಿಕಾರಿಗಳು..
Next Article ಐಸಿಸ್ ನ ಮೊದಲ ಆತ್ಮಾಹುತಿ ದಾಳಿಕೋರ