ಬೀದರ್,ಆ.10- ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗಾಂಧಿಗಂಜ್ ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗಾಂಧಿಗಂಜ್ ನ ಲಾಡಗೇರಿ ಬಡಾವಣೆಯ ಶರತ್ (28) ಹಾಗು ಸಂಗೀತಾ (26) ಆತ್ಮಹತ್ಯೆಗೆ ಶರಣಾದವರು.
ಇಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಸಂಗೀತಾ ನಿಶ್ಚಿತಾರ್ಥ ಬೇರೊಂದು ಹುಡುಗನ ಜತೆ ನಡೆದಿತ್ತು. ಶೀಘ್ರದಲ್ಲಿ ಮದುವೆ ಸಹ ನಡೆಯಬೇಕಿತ್ತು.
ಈ ಹಿನ್ನೆಲೆಯಲ್ಲಿ ಮನನೊಂದು ಶರತ್ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಪ್ರೀಯಕರನ ಸಾವಿನ ಸುದ್ದಿ ಕೇಳಿ ಸಂಗೀತಾ ತನ್ನ ಮನೆಯಲ್ಲಿನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆಯಿಂದ ಎರಡು ಕುಟುಂಗಳ ಸದಸ್ಯರು ಕಂಗಾಲಾಗಿದ್ದಾರೆ. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.