ಬೆಂಗಳೂರು,ಜು.26-ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ಮಾರಾಟದಲ್ಲಿ ಕನ್ನಡಿಗರಿಗೆ ಮೋಸ ಮಾಡುತ್ತಿದ್ದ ಖತರ್ನಾಕ್ ವಂಚಕನನ್ನು ಜಯನಗರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ವಂಚಕ ಮಣಿಪುರ ಮೂಲದ ವಾಹೆಂಗಬಮ್ ಲಲಿತ್ ಸಿಂಗ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಕನ್ನಡ ಬಾರದಿದ್ದರೂ ಕನ್ನಡಿಗರನ್ನೇ ಗುರಿಯಾಗಿಸಿಕೊಂಡ ಆರೋಪಿ ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿ ಸಿ 204ನ 1574 ಚದರಡಿ ಇರುವ ಒಂದೇ ಫ್ಲ್ಯಾಟ್‌ನ್ನು ಚಿತ್ರಾ ಮತ್ತು ಅವಿನಾಶ್ ಇಬ್ಬರಿಗೂ ಮಾರಾಟ ಮಾಡಿದ್ದಾನೆ. ಇನ್ನು ಮೂವರು ಪಾಲುದಾರರಿದ್ದ ಹಿರೇನ್ ವಾಹೇನ್ ಬಿಲ್ಡ್ ಟೆಕ್ ಎಂಬ ಕಂಪನಿಯಲ್ಲಿ ಪಾಲುದಾರರಿಗೂ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ಇನ್ನು ವ್ಯವಹಾರದ ವೇಳೆ ಚೆಕ್ ಬೇಡ ಹಣ ಕೊಡಿ ಎನ್ನುವ ಲಲಿತ್, ವಕೀಲ ಎಂ.ಸಿ.ನಾಣಯ್ಯ ಮೂಲಕ ಸಿಎಂ ಹಾಗು ಸಿಎಂ ಪ್ರಧಾನ ಕಾರ್ಯದರ್ಶಿಗಳಿಗೆ ಲಂಚ ಕೊಡುತ್ತೇನೆ ಎಂದು ನಂಬಿಸಿ ನೂರಾರು ಜನರಿಗೆ ವಂಚಿಸಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
Previous ArticlePub ದಾಳಿ: ದೂರೇ ಕೊಟ್ಟಿಲ್ಲ..?
Next Article ಗುರುವಾರ BBMP ಚುನಾವಣೆ ಅರ್ಜಿ ವಿಚಾರಣೆ