ಹುಬ್ಬಳ್ಳಿ : ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರ ಅಂತಿಮ ದರ್ಶನವನ್ನು ನಗರದ ಹೊರವಲಯದ ಸುಳ್ಳ ರಸ್ತೆಯ ಅವರ ಜಮೀನಿನಲ್ಲಿ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಸ್ಥಳಗಳಿಂದ ನೂರಾರು ಜನರು ಬಂದು ಗುರೂಜಿಯವರ ಅಂತಿಮ ದರ್ಶನ ಪಡೆದುಕೊಂಡರು. ಇನ್ನೂ ವೀರಶೈವ ವಿಧಿವಿಧಾನವಾಗಿ ಅಂತ್ಯ ಕ್ರಿಯೆ ನಡೆಯುತ್ತಿದ್ದು , ಮೂರುಸಾವಿರ ಮಠದ ಆರು ಸ್ವಾಮೀಜಿಗಳು ಪೂಜೆ ಸಲ್ಲಿಕೆ ಮಾಡಿದರು. ಗುರೂಜಿಯವರ ಮೃತದೇಹ ಜಮೀನ ಹತ್ತಿರ ಬರುತ್ತಿದಂತೆ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟುವಂತಿತ್ತು. ಗುರೂಜಿಯವರ ಅಂತಿಮ ದರ್ಶನಕ್ಕೆ ಬಂದಂತಹ ಜನರ ಕಣ್ಣೀರು ಹಾಕಿದ್ದಾರೆ.