ಜೂನ್ 10ರಂದು ಬಿಡುಗಡೆ ಆಗಿದ್ದ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಈಗ 50ನೇ ದಿನದ ಹೊಸ್ತಿಲಿನಲ್ಲಿದೆ. ಬಿಡುಗಡೆ ಮುನ್ನವೇ ಪೇಯ್ಡ್ ಪ್ರೀಮಿಯರ್ ಮೂಲಕ. ದೆಹಲಿ, ಹೈದರಾಬಾದ್, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಂಡಿದ್ದ ಚಿತ್ರ ಇಂದಿನಿಂದ (ಜುಲೈ 29)ಕ್ಕೆ ಒಟಿಟಿಗೆ ಎಂಟ್ರಿ ನೀಡಿದೆ. ವೂಟ್ ಸೆಲೆಕ್ಟ್ನಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ. ಸದ್ಯಕ್ಕೆ ಕನ್ನಡ ವರ್ಷನ್ ಮಾತ್ರ ಲಭ್ಯವಾಗಿದೆ. ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಹಾಗು ಮನೆಯಲ್ಲೇ ಕುಳಿತು ಮತ್ತೆ ಮತ್ತೆ ನೋಡಬೇಕು ಎಂದು ಹಂಬಲಿಸುವವರಿಗೆ ಇದು ಉತ್ತಮ ಅವಕಾಶ. ರಕ್ಷಿತ್ ಶೆಟ್ಟಿ ವೃತ್ತಿಜೀವನದ ಡಿಫರೆಂಟ್ ಚಿತ್ರವಾಗಿ ‘777 ಚಾರ್ಲಿ’ ಹೊರಹೊಮ್ಮಿದೆ. ಕಿರಣ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ‘ಪರಂವಾ ಸ್ಟುಡಿಯೋಸ್’ ಬಂಡವಾಳ ಹೂಡಿದೆ.
Previous Articleವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ಎಷ್ಟು?
Next Article ಸುರತ್ಕಲ್: ಫಾಝಿಲ್ ಮೃತದೇಹ ಅಂತ್ಯಕ್ರಿಯೆಗೆ ಮಸೀದಿಗೆ