ಚಿಕ್ಕಮಗಳೂರು,ಜು.11- ಜಿಲ್ಲೆಯಾದ್ಯಂತ ಭಾರೀ ಸುರಿದ ಮಳೆಯ ಆರ್ಭಟಕ್ಕೆ ಐದಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಮನೆ ಕುಸಿದುಕೊಂಡು ತಾಯಿ ಮಗಳು ಕಂಗಾಲಾದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಐದಾರು ದಿನಗಳಿಂದ ಭಾರೀ ಸುರಿದ ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದಂತೂ ನಿಜ. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಐದಳ್ಳಿ ಗ್ರಾಮದ ನಿಲಮ್ಮ ಎಂಬ ಮಹಿಳೆಗೆ ಸೇರಿದ ಮನೆ ಬೆಳ್ಳಂಬೆಳಗ್ಗೆ 5ಗಂಟೆ ಸುಮಾರಿಗೆ ಕುಸಿದು ಬಿದ್ದು, ಆತಂಕಕ್ಕೆ ಒಳಗಾಗಿದ್ದಾರೆ. 50 ವರ್ಷಗಳಿಂದ ಈ ಮನೆಯಲ್ಲಿ ನಿಲಮ್ಮ ನೆಲೆಸಿದ್ದರು.
ಹಲವು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡ ನಿಲಮ್ಮ ಒಬ್ಬಳೆ ಮಗಳ ಜತೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ನಿನ್ನೆ ಸುರಿದ ಭಾರೀ ಮಳೆ ಮನೆ ಕುಸಿತಗೊಂಡಿದ್ದಕ್ಕೆ ತಾಯಿ ಮಗಳು ಕಂಗಾಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಇದೀಗ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ಒಂದು ಸಣ್ಣ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಅದಷ್ಟು ಬೇಗ ನಮಗೊಂದು ಮನೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
Previous ArticleCM ಮನೆ ಮುತ್ತಿಗೆ ಯತ್ನ, ಕಬ್ಬು ಬೆಳೆಗಾರರು ಪೊಲೀಸರ ವಶಕ್ಕೆ
Next Article ನಾಲೆಯಲ್ಲಿ ಕೊಚ್ಚಿಹೋದ ಪಡಿತರ ಅಕ್ಕಿ ತುಂಬಿದ್ದ ಲಾರಿ