ತುಮಕೂರು : ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಕುಕ್ಕರ್ ಸ್ಪೋಟಗೊಂಡು ಅಂಗನವಾಡಿ ಕಾರ್ಯಕರ್ತೆ ಗಾಯಗೊಂಡಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ವೃತ್ತದ ಕ್ಯಾತಗಾನಚರ್ಲು ಎರಡನೇ ಅಂಗನವಾಡಿ ಕೇಂದ್ರದಲ್ಲಿ ಕುಕ್ಕರ್ ಸ್ಪೋಟಗೊಂಡಿದ್ದು, ಅಂಗನವಾಡಿ ಕಾರ್ಯಕರ್ತೆ ಚಿಟ್ಟಿ ಎಂಬಾಕೆಗೆ ಸುಟ್ಟ ಗಾಯಗಳಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ನಡೆದು ಸುಮಾರು ಮೂರ್ನಾಲ್ಕು ದಿನ ಕಳೆದಿದೆಯಾದರೂ ಸಂಬಂಧಿಸಿದ ಸಿಡಿಪಿಓ ನಾರಾಯಣ್ ಹಾಗು ಮೇಲ್ವಿಚಾರಕಿ ವಿಜಯಲಕ್ಷ್ಮಿ ಅವರು ಸೌಜನ್ಯಕ್ಕೂ ಗಾಯಾಳುವನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ತಾಲೂಕಿನ ತಿರುಮಣಿ ವೃತ್ತದಲ್ಲಿ ಸುಮಾರು 22 ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ 45 ಮಂದಿ ಕಾರ್ಯಕರ್ತರು ಮತ್ತು ಸಹಾಯಕಿಯರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಇತ್ತೀಚೆಗೆ ತಿರುಮಣಿಯ ವೃತ್ತದ ಕ್ಯಾತಗಾನ ಚರ್ಲು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಕರ್ತವ್ಯಕ್ಕೆ ಗೈರಾಗಿದ್ದ ಕಾರಣ ಕಾರ್ಯಕಾರ್ಯಕರ್ತೆ ಚಿಟ್ಟಿ ಅಡುಗೆ ಮಾಡುತ್ತಿದ್ದರು. ಈ ವೇಳೆ ಕುಕ್ಕರ್ ಸ್ಪೋಟಗೂಂಡಿದೆ. ಸದರಿ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕಿ ಕಳೆದ ಎರಡು ತಿಂಗಳಿನಿಂದ ಕೆಲಸಕ್ಕೆ ಬಾರದಿದ್ದರೂ ಸಂಬಳ ನೀಡಿದ್ದಾರೆ ಎಂಬುದು ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ.
Previous Articleಮಂಡ್ಯ ಮುಸ್ಕಾನ್ ಬೆಂಬಲಿಸಿದ್ದ ಅಲ್-ಖೈದಾ ಮುಖ್ಯಸ್ಥ ಜವಾಹಿರಿ ಇನ್ನಿಲ್ಲ
Next Article ವಿಜಯ ಸಂಕೇಶ್ವರ ಜೀವನಾಧಾರಿತ ಸಿನೆಮ ವಿಜಯಾನಂದ ಟೀಸರ್