68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ ‘ಡೊಳ್ಳು’ ‘ಕನ್ನಡದ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದಿದೆ. ಈ ಚಿತ್ರಕ್ಕೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ಅಜಯ್ ದೇವಗನ್ (ತಾನಾಜಿ: ದಿ ಅನ್ಸಂಗ್ ಹೀರೋ) ಹಾಗೂ ಸೂರ್ಯ (ಸೂರರೈ ಪೋಟ್ರು) ‘ಅತ್ಯುತ್ತಮ ನಟ’ ಪ್ರಶಸ್ತಿ ಹಂಚಿಕೊಂಡಿದ್ದಾರೆ. ‘ಸೂರರೈ ಪೋಟ್ರು’ ಚಿತ್ರದಲ್ಲಿನ ನಟನೆಗಾಗಿ ಅಪರ್ಣಾ ಬಾಲಮುರಳಿ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಅಯ್ಯಪ್ಪನುಮ್ ಕೋಶಿಯುಂ’ ಚಿತ್ರದಲ್ಲಿನ ಅಭಿನಯಕ್ಕೆ ಬಿಜು ಮೆನನ್ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳು ನಟಿ ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ಅವರಿಗೆ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಕಾಡು ಉಳಿಸುವ ಮುಗ್ಧ ಪಾತ್ರದಲ್ಲಿ ಅಭಿನಯಿಸಿದ ತಲೆದಂಡ ಚಿತ್ರಕ್ಕೆ ಪರಿಸರ ಕಾಳಜಿಯ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ ನಿರ್ದೇಶಕ ಪ್ರವೀಣ್ ಕೃಪಾಕರ್ ಇದಕ್ಕೆ ಆಕ್ಷನ್ ಕಟ್ ಹೇಳಿದ್ದರು.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ : ಡೊಳ್ಳು ಮತ್ತು ತಲೆದಂಡಕ್ಕೂ ಸಿಕ್ಕಿತು ಅವಾರ್ಡ್
Previous Articleನಾಡ ಅಧಿದೇವತೆಗೆ ಅಪಮಾನ..!
Next Article PSI ನೇಮಕಾತಿ: ಐವರ ಜಾಮೀನು ಅರ್ಜಿ ವಜಾ