ಚಿಕ್ಕಮಗಳೂರಿನಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಕಾಣುವ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ ಆಗಿದ್ದು, ಚಿತ್ರಮಂದಿರದ ಆವರಣದಲ್ಲಿಯೇ ಮಚ್ಚು, ಲಾಂಗ್ಗಳು ಝಳಪಿಸಿದೆ. ಇದರಿಂದ ಚಿತ್ರ ನೋಡಲು ಬಂದಂತಹ ಉಳಿದ ಪ್ರೇಕ್ಷಕರಿಗೆ ತೊಂದರೆ ಆಗಿದೆ. ಅಲ್ಲದೇ ಈ ಗಲಾಟೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ, ಯುವಕ ಭರತ್ ಎಂಬಾತನ ಗುಂಪೋಂದು ಲಾಂಗ್ನಿಂದ ಹಲ್ಲೆ ಮಾಡಿದೆ. ಬಳಿಕ ಯುವಕ ನೆಲಕ್ಕೆ ಬಿದ್ದು ಅಂಗಲಾಚಿದ್ರೂ ಬಿಡದೆ ಮಚ್ಚಿನಿಂದ ಬೀಸಿದೆ.
ಸದ್ಯ ಮಚ್ಚಿನ ಏಟಿನಿಂದ ತೀವ್ರವಾಗಿ ಗಾಯಗೊಂಡಿರೋ ಭರತ್ನನ್ನು ಹಾಸನ ಜಿಲ್ಲಾ ಆಸ್ಪತ್ಸೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೃತ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಕ್ರಾಂತ್ ರೋಣ ಪ್ರದರ್ಶನ ವೇಳೆ ಮಾರಾಮಾರಿ: ಓರ್ವನಿಗೆ ಗಾಯ
Previous Articleದಕ್ಷಿಣ ಕನ್ನಡದಲ್ಲಿ ಮತ್ತೆ ಹರಿದ ನೆತ್ತರು
Next Article ಹುಷಾರ್…! ಎಚ್ಚರಿಕೆಯಿಂದ ಇರಿ