ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ 15-49 ವರ್ಷ ಮಹಿಳೆಯರಲ್ಲಿ ರಕ್ತಸಂಬಂಧಗಳಲ್ಲಿ ವಿವಾಹವಾದವರ ಪೈಕಿ ಎರಡನೇ ಅಧಿಕ ಶೇಕಡಾವಾರು ಮಹಿಳೆಯರನ್ನು ಕರ್ನಾಟಕ ಹೊಂದಿದೆ.
ರಾಜ್ಯದಲ್ಲಿ ಸುಮಾರು 27ಶೇಕಡಾ ಮಹಿಳೆಯರು ಸೋದರ ಸಂಬಂಧಿಗಳು, ಮಾವಂದಿರು ಹಾಗೆಯೇ ಬಾವಂದಿರ ಜೊತೆ ಮದುವೆ ಆಗಿದ್ದಾರೆ. ಈ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು 28ಶೇಕಡಾ ಪ್ರಮಾಣವನ್ನು ಹೊಂದಿದೆ. ದೇಶದ ಒಟ್ಟು ಪ್ರಮಾಣ ಶೇಕಡಾ 11ಕ್ಕಿಂತ ಕಡಿಮೆಯಿದೆ.
ಕರ್ನಾಟಕದ ಅಂಕಿ ಅಂಶಗಳ ಪ್ರಕಾ 9.6 ಶೇಕಡಾ ಮಹಿಳೆಯರು ತಂದೆಯ ಕಡೆಯ ಮೊದಲ ಸೋದರಸಂಬಂಧಿಯನ್ನು ವಿವಾಹವಾದರೆ, 3.9ಶೇಕಡಾ ತಾಯಿಯ ಕಡೆಯ ಮೊದಲ ಸೋದರ ಸಂಬಂಧಿಯನ್ನು ವಿವಾಹವಾಗಿದ್ದಾರೆ. ಈ ಪೈಕಿ 0.5 ಶೇಕಡಾ ಎರಡನೇ ಸೋದರ ಸಂಬಂಧಿಯನ್ನು ಹಾಗು 0.2 ಶೇಕಡಾ ಸೋದರ ಮಾವನನ್ನು ಮತ್ತು 2.5 ಶೇಕಡಾರ್ತ ಸಂಬಂಧದಲ್ಲಿ ಮದುವೆಯಾಗಿದ್ದಾರೆ. ಅದರಲ್ಲಿ 0.1 ಶೇಕಡಾ ತಮ್ಮ ಬಾವನನ್ನೇ ವರಿಸಿದ್ದಾರೆ.
ವೈದ್ಯರು ಹೇಳುವ ಹಾಗ ರಕ್ತ ಸಂಬಂಧದಲ್ಲಿಯೇ ವಿವಾಹವಾಗುವುದರಿಂದ ಅಪಾಯಗಳಿವೆ. ಇದರಿಂದ ಹುಟ್ಟುವ ಮಕ್ಕಳು ದೋಷಗಳನ್ನು ಹೊಂದಿರಬಹುದು ಹಾಗೆಯೇ ಅನುವಂಶಿಕ ಕಾಯಿಲೆಗಳ ಜೊತೆಗೆ ಹುಟ್ಟಬಹುದು. ಸಾಮಾನ್ಯವಾಗಿ ಈ ತೆರನಾದ ವಿವಾಹದಿಂದ ಹುಟ್ಟಿದ ಮಕ್ಕಳಲ್ಲಿ ಸಾಮಾನ್ಯವಾಗಿ ಥಲಸ್ಸೆಮಿಯಾ ಅಸ್ವಸ್ಥತೆ ಕಂಡುಬರುತ್ತದೆ. ಜೊತೆಗೆ ಬೆನ್ನು ಮೂಳೆಯ ಸ್ನಾಯುವಿನ ಕ್ಷೀಣತೆ ಕೂಡಾ ಕಾಣಿಸಿಕೊಳ್ಳಬಹುದು. ಇದು ತಂದೆತಾಯಿ ಇಬ್ಬರಲ್ಲೂ ಒಂದೇ ತೆರನಾದ ರೂಪಾಂತರಿತ ಆಲೀಲ್‍ಜೀನ್‍ಗಳಿಂದಾಗಿ ಉಂಟಾಗುತ್ತದೆ.
ಪರಿಣಿತರ ಪ್ರಕಾರ ಸುಮಾರು 5ಶೇಕಡಾ ರಕ್ತಸಂಬಂಧಿ ದಂಪತಿಗಳಲ್ಲಿ ಪೂರ್ವಜರ ಕಾರಣದಿಂದಾಗಿ, ದಂಪತಿಗಳು ಸಾಮಾನ್ಯ ವಂಶವಾಹಿಯನ್ನು ಹೊಂದಿದ್ದರೆ ಮಕ್ಕಳಲ್ಲಿ ಅನುವಂಶಿಕ ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತದೆ. ಒಂದು ಕುಟುಂಬದಲ್ಲಿ ರಿಸೆಸಿವ್‍ಡಿಸಾರ್ಡರ್ ಇದ್ದಲ್ಲಿ ದಂಪತಿಗಳು ಗರ್ಭಧಾರಣೆಗೆ ಮೊದಲು ಹಾಗು ಪ್ರಸವ ಪೂರ್ವದಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.
2-3ಶೇಕಡಾ ವಿದ್ಯಾವಂತ ಜೊಡಿಗಳು ರಕ್ತಸಂಬಂಧದಲ್ಲಿ ಮದುವೆ ಏರ್ಪಟ್ಟಾಗ ವೈದ್ಯರ ಸಲಹೆಯನ್ನು ಪಡೆಯುತ್ತಾರೆ ಹಾಗು ಅವರು ಮುಂದೆ ಎದುರಾಗಬಹುದಾದ ಸಮಸ್ಯೆಗಳ ಕುರಿತಾಗಿಯೂ ಪರೀಕ್ಷೆಗಳನ್ನು ಮಾಡಿಸಿ ಪರಿಹಾರವನ್ನು ಬಯಸುತ್ತಾರೆ ಎಂದು ವೈದ್ಯರು ಮಾಹಿತಿ ನೀಡುತ್ತಾರೆ. ಅನುವಂಶೀಯ ಕಾಯಿಲೆಗಳಿಂದ ಬಳಲುತ್ತಿರುವ ಶೇಕಡಾ 50ರಿಂ 60 ಮಂದಿಯ ಪೋಷಕರು ರಕ್ತ ಸಂಬಂಧದಲ್ಲಿಯೇ ವಿವಾಹವಾಗಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ.
ಆರೋಗ್ಯಕರ ದಾಂಪತ್ಯಕ್ಕಾಗಿ ರಕ್ತ ಸಂಬಂಧಗಳಲ್ಲಿ ವಿವಾಹವಾಗುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು, ಅವರ ಸಲಹೆಗಳನ್ನು ಸ್ವೀಕರಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡುತ್ತಾರೆ.