ಹುಬ್ಬಳ್ಳಿ: ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನ ಹತ್ಯೆ ಮಾಡಿರುವ ಘಟನೆ ಇಂದು ನಡೆದಿದೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಖಾಸಗಿ ಹೋಟೆಲ್ ನ ರಿಸೆಪ್ಷನ್ ನಲ್ಲೇ ಚಂದ್ರಶೇಖರ್ ಗುರೂಜಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ. ಚಾಕು ಇರಿತಕ್ಕೊಳಗಾದ ಚಂದ್ರಶೇಖರ್ ಗುರೂಜಿ ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಕಮೀಷನರ್ ಲಾಬೂರಾಮ್ ದೌಡಾಯಿಸಿದ್ದು, ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನ ಕಿಮ್ಸ್ ಗೆ ರವಾನೆ ಮಾಡಲಾಗಿದೆ.
ಸರಳವಾಸ್ತು, ವಾಸ್ತು ಪರಿಹಾರದ ಸಲಹೆ ಮೂಲಕ ಚಂದ್ರಶೇಖರ್ ಗುರೂಜಿ ಖ್ಯಾತರಾಗಿದ್ದರು.
Previous Articleಬಾಲಿವುಡ್ ನತ್ತ ರಂಗಿತರಂಗ ಹೆಜ್ಜೆ
Next Article ಜ್ಞಾನಜ್ಯೋತಿ ಶಾಲೆ ವಿರುದ್ಧ FIR..