ಹುಬ್ಬಳ್ಳಿ: ಒಂದು ಗ್ರಾಮ ಅಭಿವೃದ್ಧಿ ಆಗಬೇಕಾದರೇ ಜನಪ್ರತಿನಿಧಿಗಳು, ಅಧಿಕಾರಿಗಳೇ ಬೇಕಂತಿಲ್ಲ, ಜನರೇ ಮನಸ್ಸು ಮಾಡಿದರೇ ತಮ್ಮ ಗ್ರಾಮವನ್ನು ತಾವೇ ಸುಧಾರಿಸಿಕೊಳ್ಳಬಹುದು ಎಂಬುದನ್ನು ಈ ಗ್ರಾಮಸ್ಥರು ಸಾಬೀತುಪಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಗ್ರಾಮ ಯಾವುದು, ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ಹೇಳತ್ತೇವೆ ಕೇಳಿ.
ಹೌದು, ನಿರಂತರ ಸುರಿಯುತ್ತಿರುವ ಮಳೇ… ಎಲ್ಲಿ ನೋಡಿದ್ರೂ ಕೇಸರು, ಆ ಕೇಸರಿನಲ್ಲೇ ಶಾಲೆಗೇ ಹೋಗುತ್ತಿರುವ ಮಕ್ಕಳು ಇಂತಹ ಮನುಕಲಕುವ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮ. ಗ್ರಾಮದ ನಡುಓಣಿಯ ರಸ್ತೆ ಸುಮಾರು ವರ್ಷಗಳಿಂದ ಹದಗೆಟ್ಟಿದ್ದು ಜನರು ಆ ರಸ್ತೆಯಲ್ಲಿಯೇ ಓಡಾಡುತ್ತಿದ್ದಾರೆ. ಆದರೆ ಶಾಸಕರು ಹಾಗು ಗ್ರಾಮ ಪಂಚಾಯತಿಯವರು ಮಾತ್ರ ಇತ್ತ ಗಮನಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇದೀಗ ಸುರಿಯುತ್ತಿರುವ ಮಳೆಗೆ ಓಣಿಯ ರಸ್ತೆಯಲ್ಲಾ ರಾಡಿ ರಂಬಾಟ ಆಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ತಮ್ಮ ಜೀವ ಹಾಗೂ ಜೀವನವನ್ನು ಇದರಲ್ಲೇ ಕಳೆಯುವಂತಾಗಿತ್ತು.
ಇದೀಗ ಗ್ರಾಮಸ್ಥರು ತಾವೂ ಆಯ್ಕೆ ಮಾಡಿದ ಶಾಸಕರು ಕೆಲಸ ಮಾಡುತ್ತಾರೆ ಎಂಬ ಯೋಚನೆಯಲ್ಲಿ ಕಾಲಕಳೆಯದೇ ಸ್ವಯಂಪ್ರೇರಿತವಾಗಿ ಕೆಸರುಮಯವಾಗಿರುವ ರಸ್ತೆಗೆ ಕಡಿ ಹಾಗು ಮಣ್ಣು ಹಾಕಿ ತಾತ್ಕಾಲಿಕ ಪರಿಹಾರವನ್ನು ಕಂಡುಕೊಂಡಿದ್ದಾರೆ. ಈಗಲಾದರೂ ಕುಂದಗೋಳ ಮತಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಇಲ್ಲಿ ಒಂದು ಸಾರಿ ಭೇಟಿ ನೀಡಿ ಇಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾಗಿದೆ. ಒಟ್ಟಿನಲ್ಲಿ ಎಲ್ಲವನ್ನೂ ಶಾಸಕರೇ ಸಂಬಂದಿಸಿದ ಅಧಿಕಾರಿಗಳೇ ಮಾಡಬೇಕೆಂದು ಕಾಲಹರಣ ಮಾಡದೇ ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಂಡಿರುವ ಕೊಟಗುಂಡಹುಣಸಿ ಗ್ರಾಮಸ್ಥರ ಕಾರ್ಯಕ್ಕೆ ಈಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.