Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮಳೆಯಿಂದ ನೂರಾರು ಎಕರೆ ಬೆಳೆ ಹಾನಿ
    ಸುದ್ದಿ

    ಮಳೆಯಿಂದ ನೂರಾರು ಎಕರೆ ಬೆಳೆ ಹಾನಿ

    vartha chakraBy vartha chakraJuly 19, 2022Updated:July 19, 2022No Comments1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು ,ಜು.19– ಕಳೆದ ಕೆಲವು ದಿನಗಳಿಂದ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ 2,175 ಹೆಕ್ಟೇರ್‌ಗೂ ಅಧಿಕ ಪ್ರದೇಶದ ಕೃಷಿ ಬೆಳೆ ಹಾನಿಗೊಳಗಾಗಿದೆ ಎಂದು ಕಂದಾಯ ಇಲಾಖೆಯ ಪ್ರಾಥಮಿಕ ವರದಿಗಳು ತಿಳಿಸಿವೆ.
    ಕಂದಾಯ ಇಲಾಖೆಯ ಪ್ರಾಕೃತಿಕ ವಿಕೋಪ ನಿಯಂತ್ರಣ ವಿಭಾಗ ಸರ್ಕಾರಕ್ಕೆ ಸಲ್ಲಿಸಿರುವ ಪ್ರಾಥಮಿಕ ವರದಿಯ ಪ್ರಕಾರ ಮಳೆಯಿಂದಾಗಿ ಜುಲೈ ತಿಂಗಳಿನಲ್ಲಿ 7 ಜಿಲ್ಲೆಯ 2,175 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಗೊಳಗಾಗಿದೆ. ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಅಲಸಂದೆ, ಶೇಂಗಾ ಮತ್ತಿತರ ಬೆಳೆಗಳು ನೀರು ನಿಂತು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮೋಡ ಕವಿದ ವಾತಾವರಣದಿಂದ ಭೂಮಿ ತೇವಾಂಶದಿಂದ ಕೂಡಿರುವುದೂ ಹಾನಿ ಪ್ರಮಾಣ ಹೆಚ್ಚು ಮಾಡಿದೆ.
    ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 640 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ಬಹುತೇಕ ಜಲಾವೃತವಾಗಿದೆ. ದಕ್ಷಿಣ ಕನ್ನಡದಲ್ಲಿ 223 ಮತ್ತು ಉಡುಪಿ ಜಿಲ್ಲೆಯಲ್ಲಿ 129 ಹೆಕ್ಟೇರ್‌, ಉ.ಕನ್ನಡದಲ್ಲಿ 46 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿಯಾಗಿದೆ.
    ಹಾವೇರಿ ಜಿಲ್ಲೆಯಲ್ಲಿ 270 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ವರುಣಾಕ್ರೋಶಕ್ಕೆ ತುತ್ತಾಗಿದೆ.ಹಾಸನ, ಮೈಸೂರು, ಜಿಲ್ಲೆಯಲ್ಲೂ ಮೆಕ್ಕೆಜೋಳಕ್ಕೆ ಹಾನಿ ಉಂಟಾಗಿದೆ. ಹಾಸನ ಜಿಲ್ಲೆಯಲ್ಲಿ 173 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಅಲಸಂದೆ, ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದ ಶೇಂಗಾ ಮಳೆಯ ಹೊಡೆತಕ್ಕೆ ನಲುಗಿದೆ.
    ನಿಲ್ಲದ ಪ್ರವಾಹ : 
    ರಾಜ್ಯದ ಬಹುತೇಕ ಕಡೆ ಮಳೆ ಇಳಿಮುಖವಾಗಿದೆ. ಆದರೂ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಗೆ ಬಿಡುತ್ತಿರುವುದರಿಂದ ಕೆಲವೆಡೆ ಪ್ರವಾಹ ಮುಂದುವರೆದಿದೆ.
    ತುಂಗಭದ್ರಾ ಜಲಾಶಯದಿಂದ 1.38 ಲಕ್ಷ ಕ್ಯುಸೆಕ್ಸ್‌ ನೀರು ಬಿಡಲಾಗಿದ್ದು ಹಂಪೆಯ ಸ್ಮಾರಕಗಳು ಮುಳುಗಡೆಯಾಗಿವೆ. ಬೆಳಗಾವಿಯ ಚಿಕ್ಕೋಡಿ ತಾಲೂಕಿನಲ್ಲಿ 9 ಸೇತುವೆಗಳು ಇನ್ನೂ ಮುಳುಗಿವೆ. ಆಲಮಟ್ಟಿಅಣೆಕಟ್ಟೆಯಿಂದ 1.25 ಲಕ್ಷ ಕ್ಯುಸೆಕ್ಸ್‌ ನೀರು ಹೊರಬಿಡಲಾಗುತ್ತಿದೆ.
    ರಸ್ತೆಯಲ್ಲಿ ಬಿರುಕು :
    ಚಾರ್ಮಾಡಿ ಘಾಟ್‌ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ರಸ್ತೆ ಕುಸಿಯುವ ಹಾಗೂ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನ ರಸ್ತೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಬ್ಯಾರಿಕೇಡ್‌ ಇಟ್ಟು ಕುಸಿದ ಜಾಗದಲ್ಲಿ ವಾಹನ ಸಂಚರಿಸದಂತೆ ತಡೆ ಒಡ್ಡಲಾಗಿದೆ.

    Verbattle
    Verbattle
    Verbattle
    farmers heavy rain ಉಡುಪಿ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleನಿರ್ದೇಶಕ ಮಣಿರತ್ನಂ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲು – ಕೋವಿಡ್ 19 ನೆಗೆಟಿವ್ ವರದಿ
    Next Article ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಹಗರಣಗಳ ತನಿಖೆ..
    vartha chakra
    • Website

    Related Posts

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    February 13, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LinwoodGah on ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್
    • LeonardReawn on ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 6 ಕೋಟಿ ರೂ. ನಗದು ಬಹುಮಾನ
    • LeonardReawn on ಡಿ.31ರಂದು ಮದ್ಯದಂಗಡಿ ಎಷ್ಟು ಗಂಟೆಗೆ ಓಪನ್ ಗೊತ್ತಾ?
    Latest Kannada News

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    February 13, 2026

    ಶಾಸಕರೇ ಬಾಯಿ ಮುಚ್ಚಿಕೊಂಡಿರಿ.

    February 13, 2026

    ಐಷಾರಾಮಿ ಬಸ್ಸುಗಳಲ್ಲಿ ಇವು ಇರಲೇಬೇಕು

    February 13, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.