ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿ ಬದುಕಿಗೆ ಹೊಸ ತಿರುವು ಕೊಟ್ಟ ದಿನವಿದು. ಅವರ ಹುಚ್ಚ ಮತ್ತು ಈಗ ಸಿನಿಮಾಗಳು ತೆರೆಗೆ ಬಂದ ದಿನ ಇಂದು(ಜುಲೈ 6) 21 ವರ್ಷಗಳ ಹಿಂದೆ ಹುಚ್ಚ ತೆರೆಗೆ ಬಂದಿದ್ದರೆ 10 ವರ್ಷಗಳ ಹಿಂದೆ ಈಗ ಸಿನಿಮಾ ಬಿಡುಗಡೆ ಆಗಿತ್ತು. ಹುಚ್ಚ ಸುದೀಪ್ ಬದುಕಿಗೆ ತಿರುವು ನೀಡಿದ ಚಿತ್ರ ಆದರೆ ಈಗ ಅವರ ತಾಕತ್ತು ಏನೆಂದು ಪರಿಚಯಿಸಿದ ಸಿನಿಮಾ.
ಸುದೀಪ್ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಚಿತ್ರ ಬಿಡುಗಡೆಯಾಗಿ ಸರಿಯಾಗಿ 21 ವರ್ಷ ಕಳೆದಿದೆ. 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ, ಪೋಸ್ಟರ್ಗಳಲ್ಲಿ ಕಾಣಿಸಿಕೊಂಡ ಸುದೀಪ್ ಅವರ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮ್ನಾಥ್ ಅವರ ಸುಮಧುರ ಹಾಡುಗಳು. ಜುಲೈ .6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ.2012ರಲ್ಲಿ ಸುದೀಪ್ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜೊತೆ ರಾಜಮೌಳಿ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್ ಆಗಿದ್ದು ಕೂಡ ಜುಲೈ 6ರಂದೆನ್ನುವುದು ವಿಶೇಷ.
ಇಂದು ಈ ಎರಡೂ ಸಿನಿಮಾಗಳ ನೆನಪಿಸಿಕೊಂಡು ಸುದೀಪ್ *ನನ್ನ ಜೀವನದಲ್ಲಿ ಒಂದು ಸುಂದರ ದಿನ.
ಆ ಅವಿಸ್ಮರಣೀಯ ಕ್ಷಣಗಳನ್ನು ನನಗೆ ನೀಡಿದ ಹುಚ್ಚ ಮತ್ತು ಈಗ ತಂಡದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಒಬ್ಬರು ನನ್ನನ್ನು ರೂಪಿಸಿದರು, ಒಬ್ಬರು ನನ್ನನ್ನು ಉನ್ನತಿಗೆ ತಲುಪಿಸಿದರು.” ಎಂದು ಟ್ವೀಟ್ ಮಾಡಿದ್ದಾರೆ.
ಸುದೀಪ್ ಜೀವನದಲ್ಲಿ ಮರೆಯಲಾಗದ ಸಿನಿಮಾ ಹುಚ್ಚ: ಈಗ ಸಿನಿಮಾಗಳ ನೆನೆದ ಕಿಚ್ಚ
Previous Articleಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳಿಬ್ಬರ ಬಂಧನ
Next Article ಪ್ರಿಯಾಂಕಾ ಉಪೇಂದ್ರಗೆ ಡಾಕ್ಟರೇಟ್…