ಯೋಗರಾಜ್ ಭಟ್ ನಿರ್ದೇಶನದಲ್ಲಿ ತ್ರಿಮೂರ್ತಿಗಳಾದ ಗಣೇಶ್, ದಿಗಂತ್, ಪವನ್ ಅಭಿನಯದ ‘ಗಾಳಿಪಟ-2’ ಚಿತ್ರದ ಮೂರ್ನೇ ಹಾಡು ‘ದೇವ್ಲೇ ದೇವ್ಲೇ’ ಬಿಡುಗಡೆ ಆಗಿದೆ. ಸಖತ್ ಕಾಮಿಡಿಯ ಜೊತೆಗೆ ಪೆಪ್ಪಿ ಸಂಗೀತವನ್ನು ಹೊಂದಿರುವ ಗಾಳಿಪಟ 2 ಚಿತ್ರದ “ದೇವ್ಲೆ ದೇವ್ಲೆ” ಹಾಡು ವೀಕ್ಷಕರಿಗೆ ಕಿಕ್ ನೀಡುತ್ತಿದೆ.
ಭಟ್ಟರು ಬರೆದಿರುವ ಎಣ್ಣೆ ಹಾಡನ್ನು ಹಾಡಿರುವವರು ವಿಜಯ್ ಪ್ರಕಾಶ್ ಇದಕ್ಕೆ ಸಂಗೀತ ನೀಡಿರುವವರು ಅರ್ಜುನ್ ಜನ್ಯ. ಈ ಮೂವರ ಕಾಂಬಿನೇಶನ್ ನಲ್ಲಿ ಹಾಡು ಹೊರಬಂದಿದೆ.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ “ಗಾಳಿಪಟ 2” ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ . ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಇದಕ್ಕಿದೆ.