‘ಕೆಜಿಎಫ್: ಚಾಪ್ಟರ್ 1′ ಸಿನಿಮಾ ಬಿಡುಗಡೆ ಆದಾಗಲೇ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಬಂತು. ಹಾಗಿದ್ದರೂ ಕೂಡ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ ‘ಕೆಜಿಎಫ್ 2′ ನಂತರ ಅವರು ಸಹಿ ಮಾಡಿದ ಏಕೈಕ ಸಿನಿಮಾ, ತಮಿಳಿನ ‘ಕೋಬ್ರಾ’. ಈ ಚಿತ್ರಕ್ಕೆ ಚಿಯಾನ್ ವಿಕ್ರಮ್ ಹೀರೋ. ‘ಕೋಬ್ರಾ’ ಸಿನಿಮಾಗೆ ಶ್ರೀನಿಧಿ ಅವರು ಬರೋಬ್ಬರಿ 6ರಿಂದ 7 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ. ಎರಡನೇ ಚಿತ್ರಕ್ಕೇ ಬಹುಕೋಟಿ ಬೇಡಿಕೆ ಇಡುವ ನಟಿಯಾಗಿದ್ದಾರೆ ಎನ್ನಲಾಗಿದೆ.
‘ಕೋಬ್ರಾ’ ಸಿನಿಮಾವು ಥ್ರಿಲ್ಲರ್ ಕತೆಯನ್ನು ಹೊಂದಿದ್ದು, ವಿಕ್ರಂ ಮಡದಿಯ ಪಾತ್ರದಲ್ಲಿ ಶ್ರೀನಿಧಿ ನಟಿಸಿದ್ದಾರೆ. ಸಿನಿಮಾದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಜೊತೆಗೆ ಮೃಣಾಲಿನಿ ರವಿ, ಮಿಯಾ ಜಾರ್ಜಿಯಾ, ರೋಷನ್ ಮ್ಯಾಥಿವ್, ಮೀನಾಕ್ಷಿ ಗೋವಿಂದ ರಾಜನ್ ಇನ್ನೂ ಹಲವರು ನಟಿಸಿದ್ದಾರೆ. ಅಜಯ್ ಜ್ಞಾನಮುತ್ತು, ನಿರ್ದೇಶನದ ಲಲಿತ್ ಕುಮಾರ್ ನಿರ್ಮಾಣ, ಸಂಗೀತ ಎ.ಆರ್.ರೆಹಮಾನ್ ಅವರದ್ದಾಗಿದೆ.