ವಿಕ್ರಾಂತ್ ರೋಣ ಬಿಡುಗಡೆಗಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಕ್ರಾಂತ್ ರೋಣ ಚಲನಚಿತ್ರ ಜುಲೈ 28ರಂದು಼ ಹಿಂದಿ , ಕನ್ನಡ , ತಮಿಳು , ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ . ವಿಕ್ರಾಂತ್ ರೋಣ ಫ್ಯಾಂಟಸಿ ಆ್ಯಕ್ಷನ್ – ಸಾಹಸದ ಥ್ರಿಲ್ಲರ್ ಆಗಿದ್ದು, ಅನೂಪ್ ಭಂಡಾರಿ ರಚಿಸಿ, ನಿರ್ದೇಶಿಸಿದ್ದಾರೆ . ಈ ನಡುವೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಪತಿಯ ಕನಸೊಂದರ ಸಾಕಾರ ಮಾಡಲಿದ್ದಾರೆ. ಅದುವೇ ‘ಕಾಫಿ ಆಂಡ್ ಬನ್ಸ್ ಇನ್ನೋವೇಷನ್ಸ್ ‘ಸಂಸ್ಥೆ. ಸುದೀಪ್ ಗೆ ಮೊದಲಿಂದಲೂ ಅಡಿಗೆ ಅಂದ್ರೆ ಬಲು ಅಚ್ಚು ಮೆಚ್ಚು. ಅಡುಗೆ ಮಾಡುವುದು ಅವರ ಮೆಚ್ಚಿನ ಹವ್ಯಾಸ. ಅವರ ತಂದೆಯೂ ಸಹ ಹೋಟೆಲ್ ಉದ್ಯಮದಲ್ಲಿದ್ದವರಾಗಿ ಸುದೀಪ್ ಸಹ ಅದರತ್ತ ಆಕರ್ಷಣೆ ಹೊಂದಿದ್ದರು. ಈಗ ಈ ಹೊಸ ಕಂಪನಿಯ ಮೂಲಕ ಸಣ್ಣ ಸಣ್ಣ ರೆಸ್ಟೋರೆಂಟ್, ಕೆಫೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದಾರೆ. ಸುದೀಪ್ ಪತ್ನಿ ಪ್ರಿಯಾ ಅವರೇ ಈ ಕಂಪನಿಯ ಚೇರ್ ಮನ್ ಎನ್ನೋದು ಗಮನಾರ್ಹ.
ಹೋಟೆಲ್ ಉದ್ಯಮಕ್ಕೆ ಕಿಚ್ಚ ಎಂಟ್ರಿ: ಕಾಫಿ ಬನ್ಸ್ ಕೆಫೆ ಶೀಘ್ರ ಪ್ರಾರಂಭ
Previous Articleಚಿಂತೆ ಹೆಚ್ಚಿಸಿದ ಚಿಂತನಾ ಸಭೆ..
Next Article ಮಂಗಳೂರಿಗೆ ಆಗಮಿಸಿದ ಮಿಸ್ ಇಂಡಿಯಾ ಸಿನಿ ಶೆಟ್ಟಿ