ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ನಟನೆಯ ಹೊಸ ಚಿತ್ರದ ಮುಹೂರ್ತ ಇಂದು ನೆರವೇರಿತು. ಪ್ರಸಿದ್ಧ್ ನಿರ್ದೇಶಿಸುತ್ತಿರುವ ಶೇರ್ ಗೆ ನಿರ್ಮಾಪಕ ಡಾ||ಸುದರ್ಶನ್ ಸುಂದರರಾಜ್ (ಬೀದರ್) ಕ್ಲಾಪ್ ಮಾಡಿ ಶುಭಕೋರಿದರು. ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು ಸುರೇಖ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಹಾಗು ಗುಮ್ಮಿನೇನಿ ವಿಜಯ್ ಸಂಗೀತ ಚಿತ್ರಕ್ಕಿದೆ ಇನ್ನು ಕಿರಣ್ ಅಭಿನಯದ “ಭರ್ಜರಿ ಗಂಡು” ಬಿಡುಗಡೆಗೆ ಸಿದ್ಧವಾಗಿದೆ.
Previous Articleಯಶ್ 19ನೇ ಚಿತ್ರದ ಪೋಸ್ಟರ್ ಲೀಕ್
Next Article ಸಾವರ್ಕರ್ ಫ್ಲೆಕ್ಸ್ ಮತ್ತೆ ಪ್ರತ್ಯಕ್ಷ