ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಮಂಗಳೂರು ನಗರ ಭಾಗದಲ್ಲಿ ಬಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಸಮಸ್ಯೆಯಾಗುತ್ತಿದೆ. ಈ ಹಿನ್ನಲೆ ನಿನ್ನೆ ಸಂಜೆ 9.30 ಕ್ಕೆ ಮಂಗಳೂರು ಏರ್ ಪೋರ್ಟ್ ಲ್ಯಾಂಡಿಂಗ್ ಆಗಬೇಕಾದ ಸ್ಪೈಸ್ ಜೆಟ್ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರಾತ್ರಿ 10.00 ಗಂಟೆಗೆ ಲ್ಯಾಂಡಿಂಗ್ ಆಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಅಥೋರಿಟಿ ಮಾಹಿತಿ ನೀಡಿದೆ.