ಮಂಗಳೂರು: ಆರನೇ ತರಗತಿ ಬಾಲಕ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ನಗರ ಹೊರವಲಯದ ಕಾಟಿಪಳ್ಳದಲ್ಲಿ ಜೂನ್ 27ರಂದು ಮದ್ರಾಸದಿಂದ ಬರುವಾಗ ಕೇಸರಿ ಶಾಲು ಧರಿಸಿ ಹಲ್ಲೆ ಮಾಡಿದ್ದಾರೆ ಎಂದು ಬಾಲಕ ಮಸೀದಿ ಉಸ್ತಾದ್ಗಳಿಗೆ ದೂರು ನೀಡಿದ್ದಾನೆ. ಬಾಲಕನ ಮೇಲೆ ಹಲ್ಲೆ ವಿಚಾರ ಸೂಕ್ಷ್ಮ ಪ್ರದೇಶದಲ್ಲಿ ಆತಂಕ ಮೂಡಿಸಿತ್ತು. ಆದರೆ ಪೊಲೀಸ್ ತನಿಖೆ ವೇಳೆ ಬಾಲಕನ ಕಟ್ಟು ಕಥೆ ಬಯಲಾಗಿದೆ.
ದೂರು ನೀಡುವ ಮುನ್ನ ತನ್ನ ಬಟ್ಟೆಯನ್ನು ತಾನೇ ಹರಿದುಕೊಂಡು ಬಂದಿದ್ದ ಬಾಲಕ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ.
ಶಾಲೆಯಲ್ಲಿ, ಮನೆಯಲ್ಲಿ ಯಾರೂ ನನ್ನ ಬಗ್ಗೆ ಗಮನ ವಹಿಸುತ್ತಿಲ್ಲ. ಶಾಲೆಯಲ್ಲಿ ಕಲಿತ ಪಾಠ ತಲೆಗೆ ಹತ್ತುತ್ತಿಲ್ಲ ಹೀಗಾಗಿ ಎಲ್ಲರ ಗಮನ ಸೆಳೆಯಲು ಕಟ್ಟು ಕಥೆ ಕಟ್ಟಿರುವುದಾಗಿ ಬಾಲಕ ವೈದ್ಯರು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.