ಕನ್ನಡ ನಾಡಿನ ಜೀವನದಿ ಕಾವೇರಿ ಸಂಪೂರ್ಣ ಭರ್ತಿ ಆಗಿರುವ ಹಿನ್ನೆಲೆ ಮಂಡ್ಯ ಹಾಗು ಮೈಸೂರು ನೀರಾವರಿ ಇಲಾಖೆ
ಸಿಎಂ ಭಾಗಿನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ.ಸಂಪ್ರದಾಯದಂತೆ ಕೆ ಆರ್ ಎಸ್ ಹಾಗು ಕಬಿನಿ ಡ್ಯಾಂ ಗೆ ಭಾಗಿನ ಕಾರ್ಯಕ್ರಮ ನಡೆಯಲಿದೆ ಎಂದು ಮಂಡ್ಯದಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಹೆಚ್.ಎಸ್.ಆನಂದ್ ಹೇಳಿದ್ದಾರೆ.
ಮೊದಲು 11ಗಂಟೆಗೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಿಎಂ ಬಸವರಾಜ ಬೊಮ್ಮಾಯಿ
ಬಳಿಕ KRS ಡ್ಯಾಂ ಬಾಗಿನ ಅರ್ಪಿಸಲಿದ್ದಾರೆ. KRSಗೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸುವರು. ಸದ್ಯ ಕೆ ಆರ್ ಎಸ್ ಗೆ 77 ಸಾವಿರ ಕ್ಯೂಸೆಕ್ ಒಳ ಹರಿವು ಬರ್ತಿದೆ.
ಹೊರ ಹರಿವು ಕೂಡ ಕಡಿಮೆ ಮಾಡಿದ್ದೇವೆ. ಎಲ್ಲಾ ರೀತಿಯ ಸಿದ್ದತೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ. ಎರಡನೇ ಭಾರಿ ಭಾಗಿನವನ್ನ ಸಿಎಂ ಅರ್ಪಿಸ್ತಿದ್ದಾರೆ.
ಕಾವೇರಿ ನೀರಾವರಿ ನಿಗಮ ಎಲ್ಲಾ ರೀತಿಯ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಕೊವಿಡ್ ನಿಯಮದೊಂದಿಗೆ ಭಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದ್ದು, ಅವಧಿಗೂ ಮುನ್ನ ಡ್ಯಾಂ ತುಂಬಿದೆ ಸಂತೋಷವಾಗ್ತಿದೆ. ಯಾವುದಅಹಿತಕರ ಘಟನೆಗಳು ನಡೆಯದಂತೆ ಹಂತಹಂತವಾಗಿ ನೀರು ಹೊರಗೆ ಬಿಡಲಾಗ್ತಿದೆ. ನದಿ ಪಾತ್ರದಲ್ಲಿರುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ವಹಿಸಿದ್ದೇವೆ ಎಂದರು.