ಮೈಸೂರು : ಹಾಜರಾತಿ ಪುಸ್ತಕ ನೀಡದೆ ಉಡಾಫೆ ಉತ್ತರ ನೀಡಿದ ಆರೋಪದ ಮೇಲೆ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರಿಗೆ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯ ನೋಟಿಸ್ ನೀಡಿದ್ದು, ನೋಟಿಸ್ ಗೆ ಮರು ಉತ್ತರ ನೀಡದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಮೂಹ ಸಂವಹನ ಹಾಗು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿರುವ ಡಾ.ಆರ್.ಹೇಮಲತಾ ಹಾಜರಾತಿ ಪುಸ್ತಕ ನೀಡದೆ ಉಡಾಫೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ವಿವಿಯ ಎಲ್ಲ ಸಿಬ್ಬಂದಿ ಹಾಗು ನೌಕರರು ಹಾಜರಾತಿ ನೀಡಿದ್ದಾರೆ. ಆದರೆ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರು ಈವರಗೆ ಹಾಜರಾತಿ ನೀಡಿಲ್ಲ. ಬಯೋಮೆಟ್ರಿಕ್ ಇರುವ ಕಾರಣ ಹಾಜರಾತಿ ನೀಡಲ್ಲ ಎಂದು ಉಪನ್ಯಾಸಕಿ ಡಾ.ಹೇಮಲತಾ ಅವರು ತಿಳಿಸಿದ್ದಾರೆ ಎನ್ನಲಾಗಿದೆ.
ವಿವಿಯ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರಿಗೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಕೆಎಸ್ ಓಯು ಶೈಕ್ಷಣಿಕ ಡೀನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೋಟಿಸ್ ಗೆ ಮರು ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೇಶ ರವಾನಿಸಿದ್ದಾರೆ.