ಮೈಸೂರು : ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಇಂದು ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಭಾರೀ ವಿರೋಧದ ನಡುವೆಯೂ ಕೊನೆಗೂ ನಿರ್ಮಾಣ ಹಂತಕ್ಕೆ ಇಂದು ಚಾಲನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್, ಸುತ್ತೂರು ಶ್ರೀಗಳ ಸಾನ್ನಿದ್ಯದಲ್ಲಿ ಚಾಲನೆ ನೀಡಲಾಯಿತು. ರಾಮಕೃಷ್ಣ ಮಠದ ವತಿಯಿಂದ ವಿವೇಕ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದ್ದು, ಶಾಲೆಯನ್ನು ತೆರವುಗೊಳಿಸಿ ಹಿನ್ನೆಲೆ ಹಲವಾರು ಸಂಘಟನೆಗಳಿಂದ ತೀವ್ರ ವಿರೋಧವಾಗಿತ್ತು.
ಮೈಸೂರಿನ ರಾಮಕೃಷ್ಣ ಮಠದ ವತಿಯಿಂದ ಕಾನೂನು ಹೊರಟ ನಡೆದು ನ್ಯಾಯಾಲಯದ ಹೋರಾಟದಲ್ಲಿ ಜಯಿಸಿದ ಬಳಿಕ ನಿರ್ಮಾಣ ಮಾಡಲಾಗುತ್ತಿದೆ. ಈ ನಡುವೆ ಇಂದು ಪ್ರತಿಭಟನೆ ನಡೆಯುವ ಸಾಧ್ಯತೆ ಕೂಡ ಹೆಚ್ಚಾಗಿದೆ.
ವಿವಾದಿತ ಸ್ಥಳದಲ್ಲಿ ಕೊನೆಗೂ ತಲೆ ಎತ್ತುತ್ತಿರುವ ವಿವೇಕ ಸ್ಮಾರಕ
Previous Articleಬರಿಗೈಯಲ್ಲಿ ಚರಂಡಿ ಸ್ವಚ್ಛತೆ… ಪೌರಕಾರ್ಮಿಕರಿಗೆ ಎಲ್ಲಿದೆ ಸುರಕ್ಷತೆ…?
Next Article ಜು.15ರಂದು ಓ ಮೈ ಲವ್’ ಸಿನಿಮಾ ತೆರೆಗೆ