ಪಿಎಸ್ ಐ ಹಗರಣದಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳಿವೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು ಪಿಎಸ್ಐ ಹಗರಣದ ವಿಚಾರಕ್ಕೆ ಹೇಳಿಕೆ ನೀಡಿದ್ರು.
PSI ಹಗರಣ ಈ ರಾಜ್ಯದಲ್ಲಿ ಒಂದು ದೊಡ್ಡ ಭೂತ.ಇದುವರೆಗೂ ಸಣ್ಣ ಸಣ್ಣ ಹಗರಣ ನೋಡಿದ್ದೇವೆ.ರಾಷ್ಟ್ರದಲ್ಲಿ ಎಡಿಜಿಪಿ ಅಧಿಕಾರಿಯನ್ನ ಬಂಧಿಸಿದ್ದಾರೆ ಅಂದ್ರೆ ಇನ್ನೂ ಸಹ ದೊಡ್ಡ ದೊಡ್ಡ ತಿಮಿಂಗಿಲಗಳು ಇದ್ದಾವೆ. ಕುಮಾರಸ್ವಾಮಿ ಹಾಗು ಕಾಂಗ್ರೆಸ್ ನವರು ಕೂಡ ಹೇಳಿದ್ದಾರೆ. ಇದರಲ್ಲಿ ಇನ್ನೂ ದೊಡ್ಡ ದೊಡ್ಡವರು ಇದ್ದಾರೆ. ಇವಾಗ ಸಿಕ್ಕಿರೋ ಎಡಿಜಿಪಿ ಏನೇನೋ ಅಲ್ಲ.
ಇನ್ನೂ ಬೇರೆ ಬೇರೆ ಕೆಲವರು ಇದ್ದಾರೆ. ಇನ್ನೂ ಇದರ ಬಗ್ಗೆ ಹೆಚ್ಚಿನ ತನಿಖೆಯಾಗಬೇಕು. ಈ ಹಗರಣದಲ್ಲಿ ಯಾರೇ ದೊಡ್ಡವರಿದ್ರೂ ನಿರ್ದಾಕ್ಷಿಣ್ಯವಾಗಿ ಬಂಧಿಸಬೇಕು. ಇದರಲ್ಲಿ ದೊಡ್ಡ ಲೀಡರ್ ಎರಡು ಮೂರು ಜನ ಇದ್ದಾರೆ. ಇದು ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಎಂದರು.