ಬೆಂಗಳೂರು,ಜು.27- ರಾಜ್ಯದಲ್ಲಿ ನಡೆದ 543 ಮಂದಿ ಪಿಎಸ್ಐ ನೇಮಕಾತಿ ಅಕ್ರಮದ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಸಿಐಡಿ ಅಧಿಕಾರಿಗಳು ಇಂದು ಆರೋಪಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲಿದ್ದಾರೆ.
ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದೆ. ಕೆಲ ಆರೋಪಿಗಳನ್ನು ಬಿಟ್ಟು ಉಳಿದ ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪ್ರಕರಣದ ಸಂಪೂರ್ಣ ತನಿಖೆ ಮುಗಿದವರ ವಿರುದ್ಧ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ. ಎಫ್ಐಆರ್ನಲ್ಲಿ ಹೆಸರು ಇದ್ದು,ಬಂಧನವಾಗದೆ ಇರುವ ಆರೋಪಿಗಳು ಹಾಗು ಕೊನೆಯ ಹಂತದಲ್ಲಿ ಬಂಧನವಾಗಿರುವ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಸೇರಿಸಲಾಗಿಲ್ಲ.
ಕಮೀಷನರ್ ಗೆ ಪತ್ರ:
ಇನ್ನೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಕಲಬುರಗಿ ನಗರ ಪೊಲೀಸ್ ಆಯುಕ್ತ ರವಿಕುಮಾರ್ಗೆ ಪತ್ರ ಬರೆದಿದ್ದಾರೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪಿಐಎಸ್ ನೇಮಕಾತಿ ಪರೀಕ್ಷೆ ನಡೆದಿತ್ತು. ಬಳಿಕ ಪಿಎಸ್ಐ ಪರೀಕ್ಷೆ ವೇಳೆ ಅಕ್ರಮ ನಡೆದ ವಿಷಯ ಬಹಿರಂಗವಾಗಿತ್ತು. ಈ ಹಿನ್ನೆಲೆ ಜ್ಞಾನಜ್ಯೋತಿ ಶಾಲೆಯ ಅಕ್ರಮ ಸೇರಿದಂತೆ ಪ್ರಕರಣ ಸಂಬಂಧ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಪೊಲೀಸ್ ಆಯುಕ್ತರನ್ನ ಕೇಳಿದ್ದಾರೆ.
ಯಾರನ್ನು ನೇಮಕ:
ಹುಲ್ಲೂರ್ ಅವರನ್ನು ಪರೀಕ್ಷಾ ಕೇಂದ್ರದಿಂದ ಬಿಡುಗಡೆಗೆ ರಾಯಚೂರು ಎಸ್ಪಿ ಪತ್ರ ಬರೆದಿದ್ದರಾ? ಪರೀಕ್ಷಾ ಕೇಂದ್ರದಿಂದ ಬಿಡುಗಡೆ ಮಾಡುವಂತೆ ಹುಲ್ಲೂರ ಆಯುಕ್ತರ ಕಚೇರಿಗೆ ಮನವಿ ಪತ್ರ ಕೊಟ್ಟಿದಾರೆಯೇ? ಡಿವೈಎಸ್ಪಿ ಹುಲ್ಲೂರ್ ಸ್ಥಳಕ್ಕೆ ಹೊಸಮನಿ ನೇಮಿಸದಕ್ಕೆ, ಹೊಸಮನಿ ಅವರ ಜಾಗಕ್ಕೆ ಯಾರನ್ನು ನೇಮಕ ಮಾಡಲಾಯಿತು? ಪಿಎಸ್ಐ ಪರೀಕ್ಷೆ ವೇಳೆ ಲೋಹ ಶೋಧಕ ಯಂತ್ರ ಇದ್ದರೂ ಸಹ ಪರೀಕ್ಷೆ ಒಳಗಡೆ ಡಿವೈಸ್ ತೆಗೆದುಕೊಂಡು ಹೋಗಿದ್ದಾರೆ.
ಆದರೆ ಬಾಗಿಲಲ್ಲಿ ಇರುವ ನಿಮ್ಮ ಸಿಬ್ಬಂದಿ ಯಾಕೆ ಇದನ್ನು ಪತ್ತೆ ಮಾಡಲಿಲ್ಲ? ಡಿವೈಎಸ್ಪಿ ಹುಲ್ಲೂರ್ರನ್ನು ದಿಢೀರನೆ ಯಾಕೆ ಆ ಕೇಂದದಿಂದ ಬದಲಾವಣೆ ಮಾಡಲಾಯಿತು? ಆ ಕೇಂದ್ರಕ್ಕೆ ನೇಮಕವಾದ ಡಿವೈಎಸ್ಪಿ ಹೊಸಮನಿ ಅವರಿಗೆ ಪರೀಕ್ಷಾ ತರಬೇತಿ ನೀಡಲಾಗಿತ್ತಾ? ಅಕ್ರಮ ನಡೆದ ಹಲವು ಕೇಂದ್ರಗಳಲ್ಲಿ ಮೆಟಲ್ ಡಿಟಕ್ಟರ್ ಲೋಪ್ ಕಂಡು ಬಂದಿರುವದು ಯಾಕೆ? ಎಂಬ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿ ಪತ್ರ ಬರೆದಿದೆ.
ಅಭ್ಯರ್ಥಿಗಳ ಅರ್ಜಿ ವಜಾ:
ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ.
ಪಿಎಸ್ಐ ಅಭ್ಯರ್ಥಿಗಳು ಪರೀಕ್ಷೆ ರದ್ದು ಆದೇಶ ಪ್ರಶ್ನಿಸಿ ತನಿಖೆ ಮೂಲಕ ಕಳಂಕಿತರನ್ನು ಪ್ರತ್ಯೇಕಿಸಲು ಮನವಿ ಮಾಡಿದ್ದರು. ಆದ್ರೆ ಈಗ ಕಾರಣಕೊಟ್ಟು ಅಭ್ಯರ್ಥಿಗಳ ಅರ್ಜಿ ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ.
Previous Articleಪೌರಕಾರ್ಮಿಕರ ಹಿತರಕ್ಷಣೆಗಾಗಿ ಆಯೋಗ ಸದಾಸಿದ್ಧ
Next Article ಯಾವ ಪುರುಷಾರ್ಥಕ್ಕಾಗಿ ಸಮಾವೇಶ..?