ಬಿಗ್ ಬಾಸ್ ಮನೇಲಿ ರಾಕೇಶ್ ಅಡಿಗ ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೂರ್ತಿ ಹಾಗು ಸೋನು ಗೌಡ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸೋನು ರಾಕೇಶ್ ನನ್ನು ಟಿಶ್ಯೂ ಪೇಪರ್ ಎಂದು ಕರೆದಿದ್ದಾರೆ. ರಾಕೇಶ್ ನನ್ನ ಹುಡುಗ ಎಂದು ಸ್ಫೂರ್ತಿ ಹೇಳಿದ್ದಕ್ಕೆ ಸೋನು ಅವನು ನಾನು ಬಳಸಿ ಎಸೆದ ಟಿಶ್ಯೂ ಪೇಪರ್ ಯೂಸ್ ಮಾಡ್ತೀಯಾ ಎಂದು ಕೇಳಿದ್ದಾರೆ. ಈ ಸಂಬಂಧ ಸ್ಫೂರ್ತಿ ರಾಕೇಶ್ ಗೆ ದೂರು ಕೊಟ್ಟಿದ್ದಾರೆ. ಇದೆಲ್ಲವೂ ರಾಕೇಶ್ ಮುಂದೇನೇ ನಡೆದಿದೆ. ಸ್ಫೂರ್ತಿ, ಸೋನು ಮಾತು ಕೇಳಿ ‘ಇದ್ಯಾಕೋ ಸೀರಿಯಸ್ ಆಗಿ ಲೈನ್ ಕ್ರಾಸ್ ಆಗ್ತಿದೆ’ ಅಂತ ಹೇಳಿ ರಾಕೇಶ್ ಅಲ್ಲಿಂದ ಹೊರನಡೆದಿದ್ದಾರೆ. ಆದರೆ, ಯಾವ ಅರ್ಥದಲ್ಲಿ ಸೋನು ಗೌಡ ರಾಕೇಶ್ ಗೆ ಟಿಶ್ಯೂ ಪೇಪರ್ ಅಂದಿದ್ದಾರೆ ಎನ್ನೋದು ಇನ್ನೂ ಸ್ಪಷ್ಟವಾಗಿಲ್ಲ.