ಕೆ.ಆರ್.ಎಸ್ ನಿಂದ ನದಿಗೆ ನೀರು ಬಿಡುಗಡೆಯ ಮಾಹಿತಿ ಹಿನ್ನೆಲೆ ಕಾವೇರಿ ನದಿ ಪಾತ್ರದ ಹಳ್ಳಿಗಳಲ್ಲಿ ಜನರ ಪ್ರವಾಹ ಎಚ್ಚರಿಕೆ ಡಂಗೂರ ಸಾರಲಾಗುತ್ತಿದೆ. ಜನ-ಜಾನುವಾರು ನದಿ ದಂಡೆಯ ಬಳಿ ತೆರಳದಂತೆ ಡಂಗೂರ ಸಾರಿಸಿ ಎಚ್ಚರಿಕೆ ನೀಡಲಾಗುತ್ತಿದೆ. ಸ್ಥಳೀಯ ಗ್ರಾ.ಪಂ.ಗಳ ಮೂಲಕ ಜನರಿಗೆ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಪ್ರವಾಸಿ ತಾಣಗಳ ಬಳಿ ಮಾಹಿತಿ ಫಲಕ ಅಳವಡಿಸಲಾಗಿದೆ.ಪ್ರವಾಸಿ ತಾಣಗಳಾದ ಬಲಮುರಿ,ರಂಗನತಿಟ್ಟು ಪಕ್ಷಿಧಾಮ ಹಾಗು ನಿಮಿಷಾಂಭ ದೇಗುಲದ ಬಳಿ ನದಿ ಬಳಿ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದ ಲ್ಲಿ ದೋಣಿ ವಿಹಾರ ನಿಷೇಧ ಮಾಡಲಾಗಿದೆ.
Previous Articleಟ್ರಾಫಿಕ್ ನಲ್ಲಿ ಸಿಲುಕಿದ 108 ಆಂಬ್ಯುಲೆನ್ಸ್
Next Article ನಟಿ ಸಾಯಿ ಪಲ್ಲವಿ ಹೈಕೋರ್ಟ್ ಹಾಜರಾಗುವಂತೆ ಸೂಚನೆ..