ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹೊಂಬಾಳೆ ಫಿಲ್ಮ್ಸ್ ಮೂಲಕ ಮತ್ತೆ ಕಂ ಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಸ್ಟುಡಿಯೋಗೆ ರಮ್ಯಾ ಭೇಟಿ ನೀಡಿದ್ದಾರೆ. ಹೌದು, ರಮ್ಯಾ ನಿನ್ನೆಯಷ್ಟೇ, ಕೆ.ಆರ್.ಜಿ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಅಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಹಾಗಾಗಿ ರಮ್ಯಾ ಹೊಂಬಾಳೆ ಫಿಲ್ಮ್ಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ರಮ್ಯಾ ಈ ಹಿಂದೆಯೂ ಕೂಡ ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣ ಮಾಡುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದರು. ಇದಲ್ಲದೆ ರಮ್ಯಾ ಹೊಂಬಾಳೆ ಫಿಲ್ಮ್ಸ್ ಮೂಲಕ ಕಮ್ ಬ್ಯಾಕ್ ಮಾಡಬೇಕು ಎಂಬುದು ಪುನೀತ್ ಆಸೆಯಾಗಿತ್ತು. ಪುನೀತ್ ಗಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲು ಹೊರಟಿದ್ದ ಸಿನಿಮಾವೊಂದಕ್ಕೆ ರಮ್ಯಾ ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಪುನೀತ್ ರಾಜ್ ಕುಮಾರ್ ಬಯಸಿದ್ದರು. ಅಭಿಮಾನಿಗಳು ಕೂಡ ರಮ್ಯಾ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡೋದು ಯಾವಾಗ ಅಂತ ನಿರೀಕ್ಷೆಯಲ್ಲಿದ್ದಾರೆ.
Previous Articleವಿಚಿತ್ರ ಫ್ಯಾಷನ್ ನಿಂದ ಹೆಸರಾಗಿದ್ದ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲು
Next Article ಬಿಗ್ ಬಾಸ್ ಮನೆಯಿಂದ ಸೋನು ಗೌಡ ಮೊದಲ ವಾರವೇ ಔಟ್?