ವಂಚನೆ ಪ್ರಕರಣ ಸಂಬಂಧ ನಟ, ನಿರ್ದೇಶಕ, ನಿರ್ಮಾಪಕ ವೀರೇಂದ್ರ ಬಾಬು ಅವರನ್ನು ಬೆಂಗಳೂರಿನ ಕೋಡಿಗೆಹಳ್ಳಿ ಪೋಲೀಸರು ಬಂಧಿಸಿದ್ದಾರೆ. ಸ್ವಯಂ ಕೃಷಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಆಗಿದ್ದು ವೀರೇಂದ್ರ ಬಾಬು ರಾಷ್ಟ್ರೀಯ ಜನಹಿತ ಪಕ್ಷ ಎಂಬ ರಾಜಕೀಯ ಪಕ್ಷ ಕಟ್ಟಿದ್ದರು. ಮುಂಬರುವ ಚುನಾವಣೇಲಿ ಎಂಎಲ್ಎ, ಎಂಪಿ ಸೀಟ್ ಕೊಡಿಸೋದಾಗಿ ಹೇಳಿ ವಂಚಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಜನರಿಂದ ಸುಮಾರು 1.89ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆನ್ನಲಾಗಿದೆ. ಬಾಬು ವಿರುದ್ಧ ಬಸವರಾಜ ಘೋಷಾಲ್ ದೂರು ಕೊಟ್ಟಿದ್ದು ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.