ಮಂಗಳೂರು:ನಗರದ ಜಯನಗರ ಸರ್ಕಾರಿ ಶಾಲೆಯ ಬಳಿ ಕೊಡಿಯಾಲ ಬೈಲು ಸಂಪರ್ಕಿಸುವ ರಸ್ತೆ ಕೆಸರುಮಯವಾಗಿದ್ದು, ಈ ಭಾಗದ ಜನರು ಮತ್ತು ವಿದ್ಯಾರ್ಥಿಗಳು ನಡೆದಾಡಲು ಸಂಕಷ್ಟ ಪಡುತ್ತಿದ್ದಾರೆ. ಎರಡು ದಿನದಲ್ಲಿ ರಸ್ತೆ ದುರಸ್ತಿ ಪಡೆಸಿಕೊಡುವ ಭರವಸೆ ನೀಡಿ 15 ದಿನ ಕಳೆದರೂ ಸ್ಥಳಕ್ಕೆ ಬಾರದ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿನ ಸ್ಥಳೀಯರು ಕಳೆದ 15 ದಿನಗಳ ಮೊದಲು ಶ್ರಮಾಧಾನ ಮಾಡುವ ಮೂಲಕ ರಸ್ತೆಯಲ್ಲಿ ನಡೆದಾಡಲು ಅಲ್ಪ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆ ಸಂದರ್ಭ ಜನಪ್ರತಿನಿಧಿಗಳು ಎರಡು ದಿನದ ನಂತರ ನಗರ ಪಂಚಾಯತಿ ವತಿಯಿಂದ ಜೆಸಿಬಿ ತಂದು ಉಳಿದ ಕೆಲಸವನ್ನು ಮಾಡಿಕೊಡುವುದಾಗಿ ಸ್ಥಳೀಯರಿಗೆ ಭರವಸೆಯನ್ನು ನೀಡಿದ್ದರು. ಆದರೆ 15 ದಿನ ಕಳೆದರೂ ಇತ್ತ ಜನಪ್ರತಿನಿಧಿಗಳು ಸುಳಿಯಲೇ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.