ತುಮಕೂರು: ಮಾಂಗಲ್ಯ ಸರ ಕದ್ದು ಪರಾರಿಯಾಗುತಿದ್ದ ಚೋರರಿಗೆ ಜನರು ಸಖತ್ ಪಾಠ ಕಲಿಸಿದ್ದಾರೆ. ಅಲ್ಲದೆ ಅವರನ್ನ ಬೆನ್ನಟ್ಟಿ ಹಿಡಿದು ಕೈಗೆ ಹಗ್ಗ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹಾಲಗೊಂಡನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ತಮ್ಮ ಜಮೀನಿಗೆ ತೆರಳುತಿದ್ದ ಸುಜಾತ ಅವರನ್ನು ಹಿಂಬಾಲಿಸಿದ ಕಳ್ಳರು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ. ಸುಜಾತ ಜೋರಾಗಿ ಕಿರುಚಿಕೊಂಡಿದ್ದಾರೆ. ಸುಜಾತರ ಕೂಗಾಟ ಕೇಳಿ ಓಡಿದ ಸ್ಥಳೀಯರು ಬೈಕ್ ನಲ್ಲಿ ಇಬ್ಬರು ಪರಾರಿಯಾಗುತಿದ್ದನ್ನು ಕಂಡಿದ್ದಾರೆ. ಬಳಿಕ ಬೆನ್ನಟ್ಟಿದ ಗ್ರಾಮಸ್ಥರಿಗೆ ಮಾಂಗಲ್ಯ ಸಮೇತ ಖದೀಮರು ಸಿಕ್ಕಿ ಬಿದಿದ್ದಾರೆ. ಚೋರರನ್ನು ಹಿಡಿದು ಹಳ್ಳದಲ್ಲಿ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಬಂದ ದಂಡಿನಶಿವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ನೋಂದಣಿಯ ಪಲ್ಸರ್ ಬೈಕ್ ನಲ್ಲಿ ಬಂದಿದ್ದರು.