ತುಮಕೂರು: ಮೊದಲು ದೀಪಾವಳಿ ಪಟಾಕಿ ಸಿಡಿದಂಗೆ ಬಾಂಬ್ ಸಿಡಿತಾಯಿತ್ತು. ಇಡೀ ದೇಶದ ಉದ್ದಗಲಕ್ಕೆ ಬಾಂಬ್ ಸಿಡಿತಾ ಇತ್ತು. ಇವತ್ತು ಅದೆಲ್ಲ ಎಲ್ಲಿದೇ ಹೇಳಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎನ್.ಐ.ಎ ದಾಳಿ ಪ್ರಕರಣ ಗೃಹಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ 3 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಅವರಿಗೆ ಟೆರರಿಸ್ಟ್ ಜೊತೆ ಲಿಂಕ್ ಇತ್ತು ಎಂದು ವಿಚಾರಣೆ ಮಾಡಿದ್ದಾರೆ. ನಮ್ಮ ಕೇಂದ್ರ ರಕ್ಷಣಾ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಸಂದೇಶ ನೀಡಿತ್ತು. ಸುಮಾರು 15-20 ದಿನಗಳ ಕಾಲ ಅವರನ್ನು ಕಾದಿದ್ದು. ಅವರನ್ನು ಅಬ್ಸರ್ವ್ ಮಾಡಿ ನಿನ್ನೆ ವಿಚಾರಣೆಗೆ ಒಳ ಪಡಿಸಿದ್ದಾರೆ. ಆರು ರಾಜ್ಯಗಳಲ್ಲಿ ಎನ್.ಐ.ಎ ಅವರು ಕಾರ್ಯಾಚರಣೆ ಮಾಡಿದ್ದಾರೆ. ಮೊದಲು ದೀಪಾವಳಿ ಪಟಾಕಿ ಸಿಡಿದಂಗೆ ಬಾಂಬ್ ಸಿಡಿತಾಯಿತ್ತು. ಇಡೀ ದೇಶದ ಉದ್ದಗಲಕ್ಕೆ ಬಾಂಬ್ ಸಿಡಿತಾ ಇತ್ತು. ಇವತ್ತು ಅದೆಲ್ಲ ಎಲ್ಲಿದೇ ಹೇಳಿ. ಎಲ್ಲವನ್ನು ಲಾಜಿಕಲ್ ಎಂಡ್ ವರೆಗೂ ತಗೊಂಡು ಹೋಗಿ, ಅವರನ್ನು ಜೈಲಿಗೆ ಕಳುಹಿಸಿ, ಅವರಿಗೆ ಶಿಕ್ಷೆಯಾಗುತ್ತಿದೆ. ಸಣ್ಣ ಪಾಯಿಂಟ್ ಸಿಕ್ಕರು ಕೂಡ , ಅಷ್ಟು ಸೀರಿಯಸ್ ಆಗಿ ಎನ್.ಐ.ಎ ನವರು ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.