ತುಮಕೂರು: ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆಟೋಚಾಲಕ ಬದುಕಿ ಬರಲೇ ಇಲ್ಲ. ನಿರಂತರ 48 ಗಂಟೆಗಳ ಬಳಿಕ ಆತನ ದೇಹ ಶವವಾಗಿ ಪತ್ತೆಯಾಗಿದೆ. ಆಟೋಚಾಲಕನ ಮೃತದೇಹ ಕಂಡ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅದು ಜುಲೈ 16ರ ಮಧ್ಯಾಹ್ನ ಸುಮಾರು 2.30ರ ಸಮಯ. ಇಡೀ ತುಮಕೂರು ಮಳೆಯ ಅಬ್ಬರದಲ್ಲಿ ಮುಳುಗಿ ಹೋಗಿತ್ತು. ನೀರಿನಲ್ಲಿ ಸಿಲುಕಿದ್ದ ತನ್ನ ಆಟೋ ತಳ್ಳುವ ವೇಳೆ ಮೊಬೈಲ್ ಜಾರಿ ನೀರಿಗೆ ಬಿದಿತ್ತು. ಇದನ್ನ ತೆಗೆದುಕೊಳ್ಳಲು ಹೋದ ಆಟೋ ಚಾಲಕ ಅಮ್ಜದ್ ನೀರಿನ ರಭಸಕ್ಕೆ ಕೆಳಗೆ ಬಿದ್ದ ಕ್ಷಣ ಮಾತ್ರದಲ್ಲೇ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಸುದ್ದಿ ತಿಳಿದ ತಿಲಕ್ ಪಾರ್ಕ್ ಪೊಲೀಸರು ಮಹಾನಗರ ಪಾಲಿಕೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಅಂದು ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿದರು ಅಮ್ಜದ್ ಸುಳಿವು ಸಿಗಲಿಲ್ಲ. ಬಳಿಕ ಭಾನುವಾರ ಮುಂಜಾನೆ 20 ಜನರ ತಂಡದ ಎನ್ಡಿಆರ್ಎಫ್ ಸಿಬ್ಬಂದಿ, ಪಾಲಿಕೆ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಇವರಲ್ಲದೆ ಸ್ಥಳೀಯರು ಕೂಡ ಸಂಜೆವರಗೆ ಕಾರ್ಯಚರಣೆ ಮಾಡಿದರು ಯಾವುದೇ ಪ್ರಯೋಜನವಾಗಿಲಿಲ್ಲ. ಸಂಜೆ ವೇಳೆ ಮಳೆ ಜೋರಾದ ಹಿನ್ನಲೆ ಕಾರ್ಯಚರಣೆ ಸ್ಥಗಿತಗೊಳಿಸಲಾಗಿತ್ತು.
ಮತ್ತೆ ಸೋಮವಾರ ಮುಂಜಾನೆಯಿಂದ ಎನ್ಡಿಆರ್ಎಫ್, ಮಹಾನಗರ ಪಾಲಿಕೆ, ಎಸ್ ಡಿಎಫ್ ಆರ್ ಹಾಗೂ ಸ್ಥಳೀಯರು ಪ್ರತ್ಯೇಕ ತಂಡಗಳಾಗಿ ಹುಡುಕಾಟ ನಡೆಸಿದರು. ಎನ್ ಡಿಆರ್ಎಫ್ ಎರಡು ಬೋಟ್ ಗಳಲ್ಲಿ ಭೀಮಸಂದ್ರ ಕೆರೆ ಆವರಣ ತಲಾಷ್ಮಾಡಿದರು. ಪಾಲಿಕೆ ಹಾಗೂ ಎಸ್ ಡಿಆರ್ ಎಫ್ ತಂಡ ಜಂಟಿಯಾಗಿ ರಾಜಕಾಲುವೆಯ ಸಿಸಿ ಕಾಮಗಾರಿ ಅಂತಿಮಗೊಂಡ ಸ್ಥಳದಿಂದ ಜಲಶುದ್ಧಿಘಟಕದ ನಡುವೆ ಕಾರ್ಯಚರಣೆ ಇಳಿದರು. ಕಾಲವೆಯ ಸುತ್ತು ಮುತ್ತ ಬೆಳೆ ಬೃಹತ್ ಗಿಡ, ಪೊದೆಗಳನ್ನ ತೆರವುಗೊಳಿಸಿದರು.
ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ನಾಪತ್ತೆಯಾದ ತುಮಕೂರಿನ ರಿಂಗ್ ರಸ್ತೆಯ ರೈಲ್ವೆ ಅಂಡರ್ ಪಾಸ್ ಬಳಿಯಿಂದ ಸಿಸಿ ಕಾಮಗಾರಿಯ ಅಂತಿಮಗೊಂಡ ರಾಜಕಾಲುವೆ ವರೆಗೆ ಶೋಧ ನಡೆಸಿದರು. ಅಂತಿಮವಾಗಿ ಪಾಲಿಕೆ ಹಾಗೂ ಎಡಿಆರ್ಎಫ್ ನ ಕಾರ್ಯಚರಣೆ ವೇಳೆ ಮೊದಲು ಅಮ್ಜದ್ ಕಾಲು ಕಾಣಿಸಿಕೊಂಡಿದೆ. ತಕ್ಷಣ ಜೆಸಿಬಿ ಮೂಲಕ ಆತನ ಇಡೀ ದೇಹವನ್ನು ಹೊರಗೆ ತೆಗೆಯಲಾಯಿತು.
ಅಮ್ಜದ್ ಮೃತ ದೇಹ ಪತ್ತೆಯಾಗುತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ಕೆಲವೇ ಸಮಯದಲ್ಲಿ ಸಾವಿರಾರು ಮಂದಿ ಘಟನಾ ಸ್ಥಳದಲ್ಲಿ ಜಮಾವಣೆಗೊಂಡರು. ಒಂದು ಜೆಸಿಬಿಯಿಂದ ಮತ್ತೊಂದು ಜೆಸಿಬಿಗೆ ಸ್ಥಳಾಂತರಿಸಿ ಅಲ್ಲಿಂದ ತುಮಕೂರು ಜಿಲ್ಲಾ ಆಸ್ಪತ್ರೆ ಶವಾಗರಕ್ಕೆ ತರಲಾಗಿದೆ. ಶವಾಗಾರಕ್ಕೆ ನಗರಶಾಸಕ ಜ್ಯೋತಿ ಗಣೇಶ್, ತಹಶೀಲ್ದಾರ್ ಮೋಹನ್, ಪಾಲಿಕೆ ಕಮೀಷನರ್ ರೇಣುಕಾ, ಮಾಜಿ ಶಾಸಕ ರಫೀಕ್ ಅಹಮದ್, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಸೇರಿದಂತೆ ಹಲವರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಜಿಲ್ಲಾಡಳಿತ ಮೃತನ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಬಗ್ಗೆ ಸರ್ಕಾರದ ಗಮನ ಸೆಳೆದಿದೆ.
ಎಡಿಆರ್ಎಫ್ ನ