ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿ ವರ್ಸಸ್ ಜೆಡಿಎಸ್ ನಡುವೆ ಬ್ಯಾನರ್ ಕಾಳಗ ಶುರುವಾಗಿದೆ. ಡಿ.ಕೊರಟಗೆರೆ ಗ್ರಾಮದಲ್ಲಿ ನಡೆದ ಗಲಾಟೆ ಕುರಿತಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಒಬ್ಬರ ನಂತರ ಒಬ್ಬರು ಪತ್ರಿಕಾಗೋಷ್ಟಿ ಆಯೋಜಿಸಿ ಆರೋಪಗಳ ಸರಮಾಲೆ ಪೋಣಿಸುತ್ತಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭ ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ಫೈಟ್ ಶುರುವಾಗಿದೆ. ಗೂಳೂರು ಹೋಬಳಿ ಮಸ್ಕಲ್ ಪಾಂಚಾಯ್ತಿ ವ್ಯಾಪ್ತಿಯ ಡಿ.ಕೊರಟಗೆರೆ ಗ್ರಾಮದಲ್ಲಿ ನಡೆದ ಜಾತ್ರೆ ವೇಳೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಎರಡು ಪಕ್ಷದ ಕಾರ್ಯಕರ್ತರು ಬಡಿದಾಡಿಕೊಂಡು ಆಸ್ಪತ್ರೆ ಸೇರಿದ ಬೆನ್ನಲ್ಲೆ ಇದೀಗ ತಪ್ಪು ಯಾರದ್ದು, ಅಂತೇಳಿ ಎರಡು ಪಕ್ಷಗಳ ಮುಖಂಡರು ಪತ್ರಿಕಾಗೋಷ್ಟಿ ಕರೆದು ದೂರುಗಳ ಸರಮಾಲೆಯನ್ನ ಪೋಣಿಸುತ್ತಿದ್ದಾರೆ. ನೆನ್ನೆಯಷ್ಟೆ ಬಿಜೆಪಿ ಕಾರ್ಯಕರ್ತರು ಪತ್ರಿಕಾಗೋಷ್ಟಿ ನಡೆಸಿದ್ದರು, ಅದಕ್ಕೆ ವಿರುದ್ದವಾಗಿ ಇಂದು ಜೆಡಿಎಸ್ ಪತ್ರಿಕಾಗೋಷ್ಟಿ ನಡೆಸಿ, ವಾಸ್ತವಾಂಶವೇನು ಎಂದು ತಿಳಿಸುವ ಪ್ರಯತ್ನ ಮಾಡಿತು.
ಜಾತ್ರೆಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ. ಅದು ಜೆಡಿಎಸ್ ವೋಟ್ ಗಳು ಇರುವ ಊರು, ಬಿಜೆಪಿಯವರದ್ದು, ಎರಡು ಪ್ಲೆಕ್ಸ್ ಇದ್ರೆ, ಜೆಡಿಎಸ್ ಪಕ್ಷದ್ದು, ೫೦ಕ್ಕೂ ಹೆಚ್ಚು ಬ್ಯಾನರ್ಗಳಿದ್ದು, ಇದೇ ಬ್ಯಾನರ್ ವಿಚಾರಕ್ಕೆ ಗಲಾಟೆಯಾಗಿರುವುದು ಸತ್ಯ. ಆದ್ರೆ, ಸುಖಾಸುಮ್ಮನೆ ಕೋಮು ಬಣ್ಣವನ್ನ ಬಿಜೆಪಿ ಬಳಿಯುತ್ತಿದೆ. ಅಲ್ಲಿ ಎಲ್ಲರೂ ಅಣ್ಣ ತಮ್ಮಂದಿರAತೆ ಇದ್ದಾರೆ ಎಂದು ಮುಖಂಡ ಹಿರೇಹಳ್ಳಿ ಮಹೇಶ್ ತಿಳಿಸಿದ್ರು
ಒಟ್ನಲ್ಲಿ ನೈಜತೆಯನ್ನ ಬಿಟ್ಟು ಬಿಜೆಪಿಯವರು ಬೇರೆ ಕಥೆ ಹೇಳುತ್ತಿದ್ದಾರೆ, ಇನ್ನು ನಿತಿನ್ ಎಂಬಾತ ಕ್ಷೇತ್ರದ ಮತದಾರನಲ್ಲ, ಅವನು ರೌಡಿ ಶೀಟರ್, ಅವನ ಮೇಲೆ ಹಲ್ಲೆ ಮಾಡಿದ್ರು ಅಂತಿದ್ದಾರೆ ಇದೆಲ್ಲವೂ ಶುದ್ದ ಸುಳ್ಳು ಎಂದರು. ಸತ್ಯ ಯಾವ್ದು ಸುಳ್ಳು ಯಾವ್ದು ಅನ್ನುವುದು ಪೊಲೀಸರ ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ.