Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕಳ್ಳರ ತಾಣ ಆಯ್ತು.. ತುಮಕೂರು ಬಸ್ ನಿಲ್ದಾಣ..!!
    ಸುದ್ದಿ

    ಕಳ್ಳರ ತಾಣ ಆಯ್ತು.. ತುಮಕೂರು ಬಸ್ ನಿಲ್ದಾಣ..!!

    vartha chakraBy vartha chakraJuly 19, 2022Updated:July 19, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ತುಮಕೂರು: ಜಿಲ್ಲಾ ಕೇಂದ್ರದ ಕೆ‌.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
    ತುಮಕೂರು ಕೆ.ಎಸ್.ಆರ್.ಟಿ‌.ಸಿ ಬಸ್ ನಿಲ್ದಾಣಕ್ಕೆ ಪ್ರತಿ ದಿನ ಸಾವಿರಾರು ವಿದ್ಯಾರ್ಥಿಗಳು, ಪ್ರಯಾಣಿಕರು ಬಂದು ಹೋಗುತ್ತಾರೆ. ಪ್ರತಿ ನಿತ್ಯ ಲಕ್ಷಾಂತರ ರೂ. ಆದಾಯ ಬರುತ್ತದೆ. ಆದರೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ನಿಗಮದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪ್ರತಿ ದಿನ ಹತ್ತಾರು ಮಂದಿ ಪ್ರಯಾಣಿಕರು ತಮ್ಮ ಬೆಲೆ ಬಾಳುವ ಮೊಬೈಲ್, ಹಣವಿದ್ದ ಪರ್ಸ್, ಇನ್ನಿತರೆ ವಸ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸೋಮವಾರ ಸಂಜೆ ವಿದ್ಯಾರ್ಥಿನಿಯೋರ್ವಳ ಮೊಬೈಲ್ ಬಸ್ ಹತ್ತುವಾಗ ಕಳುವಾಗಿದೆ. ಮಂಗಳವಾರ ಬೆಳಗ್ಗೆ ಕೂಡ ಓರ್ವ ಪ್ರಯಾಣಿಕರು ತಮ್ಮ ಪರ್ಸ್ ಕಳೆದುಕೊಂಡಿದ್ದಾರೆ. ಪ್ರತಿ ನಿತ್ಯ ಕನಿಷ್ಠ ಒಬ್ಬರಾದರೂ ಮೊಬೈಲ್, ಪರ್ಸ್ ಕಳೆದುಕೊಂಡು ಪರದಾಡುವ ದೃಶ್ಯ ಬಸ್ ನಿಲ್ದಾಣದಲ್ಲಿ ಸರ್ವೇ ಸಾಮಾನ್ಯವಾಗಿದೆ.
    ಬೈಕ್ ಕಳವು ಹೆಚ್ಚು; ಪ್ರಯಾಣಿಕರ ಪಾಡು ಒಂದಾದರೆ ಇನ್ನೂ ಇಲ್ಲಿನ ಚಾಲಕ, ನಿರ್ವಾಹಕರು ಹಾಗು ಸಿಬ್ಬಂದಿಯ ಪಾಡು ಇನ್ನೊಂದಾಗಿದೆ. ಬಸ್ ನಿಲ್ದಾಣದ ಒಳಗೆ ನಿಲ್ಲಿಸಿದ್ದ ಸಿಬ್ಬಂದಿಯ ಬೈಕುಗಳು ಕೂಡ ಕಳ್ಳತನವಾಗುತ್ತಿವೆ. ಬೆಳಗ್ಗೆ ನಿಲ್ಲಿಸಿದ್ದ ಬೈಕ್ ಸಂಜೆ ವೇಳೆಗೆ ಕಳುವಾಗಿರುತ್ತದೆ. ಇಷ್ಟೆಲ್ಲಾ ಆದರೂ ಬಸ್ ನಿಲ್ದಾಣದ ಅಧಿಕಾರಿಗಳು ಸಾರ್ವಜನಿಕ ಸುರಕ್ಷತೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎನ್ನುವ ದೂರು ಪ್ರಯಾಣಿಕರದ್ದಾಗಿದೆ.
    ಭದ್ರತೆ ಮಾಯ; ನಿತ್ಯ ಸಾವಿರಾರು ಮಂದಿ ಬಂದು ಹೋಗುವ ಈ ಬಸ್ ನಿಲ್ದಾಣದಲ್ಲಿ ಭದ್ರತೆ ಮರೀಚಿಕೆಯಾಗಿದೆ. ನಿಗಮದ ಭದ್ರತಾ ಸಿಬ್ಬಂದಿ ಹುಡುಕಿದರೂ ಸಿಗುವುದಿಲ್ಲ. ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಾದ ಭದ್ರತಾ ಸಿಬ್ಬಂದಿ ಅಲ್ಲಲ್ಲಿ ಕಚೇರಿ ಒಳಗೆ ಕುಳಿತಿರುತ್ತಾರೆ. ಹೀಗಾಗಿ ಕಳ್ಳರಿಗೆ ಭಯವಿಲ್ಲದಂತಾಗಿದೆ. ಸಿಸಿ ಕ್ಯಾಮೆರಾಗಳು ಹುಡುಕಿದರೂ ಸಿಗುವುದಿಲ್ಲ ಎನ್ನುತ್ತಾರೆ ಪ್ರಯಾಣಿಕರು.
    ಜಾಹೀರಾತು ಹಾವಳಿ; ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಿಂತಲೂ ಜಾಹೀರಾತು ಹಾವಳಿ ಹೆಚ್ಚಾಗಿದೆ. ಕಿವಿಗಡಚ್ಚಿಕ್ಕುವ ಆಡಿಯೋ ಜಾಹಿರಾತನ್ನು ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ಏರು ಧ್ವನಿಯಲ್ಲಿ ಪ್ರಸಾರ ಮಾಡಲಾಗುತ್ತಿರುತ್ತದೆ. ಪ್ರಯಾಣಿಕರ ಗಮನ ತಮ್ಮ ವಸ್ತುಗಳ ಬದಲಾಗಿ ಈ ಜಾಹೀರಾತುಗಳ ಕಡೆ ಇರುತ್ತದೆ. ಹೀಗಾಗಿ ಕಳ್ಳರು ಸುಲಭವಾಗಿ ಪ್ರಯಾಣಿಕರ ವಸ್ತುಗಳನ್ನು ಕದಿಯುತ್ತಿದ್ದಾರೆ.
    ಪೊಲೀಸರು ಕಾಣಲ್ಲ; ಪ್ರತಿನಿತ್ಯ ಸಂಜೆ ಒಮ್ಮೆ ಪೊಲೀಸ್ ಜೀಪ್ ಸೈರನ್ ಹಾಕಿಕೊಂಡು ಬಂದು ಹೋಗುತ್ತದೆ, ಅದಕ್ಕೂ‌ ಮುನ್ನ ಯಾರೂ ಇರುವುದಿಲ್ಲ. ಬಸ್ ನಿಲ್ದಾಣದ ಪೊಲೀಸ್ ಉಪ ಠಾಣೆ ಸದಾ ಬಾಗಿಲು ಮುಚ್ಚಿರುತ್ತದೆ, ಹೀಗಾಗಿ ಕಳ್ಳರು ನಿರಾತಂಕವಾಗಿ ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ ಎನ್ನುವುದು ವಿದ್ಯಾರ್ಥಿಗಳ ದೂರಾಗಿದೆ. ನಿಲ್ದಾಣದಲ್ಲಿ ಈವರೆಗೆ ಕಳುವಾದ ಮೊಬೈಲ್, ಪರ್ಸ್ ಗಳ ಪೈಕಿ ಯಾರಿಗೂ ತಮ್ಮ ವಸ್ತುಗಳು ವಾಪಾಸು ಸಿಕ್ಕ ಉದಾಹರಣೆಗಳಿಲ್ಲ. ಮೊಬೈಲ್ ಪರ್ಸ್, ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಪೊಲೀಸರು ಕೂಡ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಬಸ್ ನಿಲ್ದಾಣದಲ್ಲಿರುವ ಉಪ ಪೊಲೀಸ್ ಠಾಣೆಯಲ್ಲೇ ದೂರು ನೀಡಲು ಅವಕಾಶ ನೀಡಿದರೆ ವಸ್ತುಗಳನ್ನು ಕಳೆದುಕೊಂಡವರು ದೂರು ನೀಡುತ್ತಾರೆ. ಆಗ ಪೊಲೀಸರು ಕ್ರಮ ಜರುಗಿಸಬಹುದು ಎನ್ನುವುದು ಪ್ರಯಾಣಿಕರ ಆಗ್ರಹವಾಗಿದೆ.
    ನಿಲ್ದಾಣಾಧಿಕಾರಿಯೂ ಇಲ್ಲ; ಇನ್ನು ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದು ದೂರು ಸಲ್ಲಿಸಲು ನಿಲ್ದಾಣಾಧಿಕಾರಿ ಕಚೇರಿಗೆ ತೆರಳಿದರೆ ಅದು ಕೂಡ ಬಾಗಿಲು ಮುಚ್ಚಿರುತ್ತದೆ, ದೂರು ದುಮ್ಮಾನ ಹೇಳಿಕೊಳ್ಳಲು ನಿಲ್ದಾಣಾಧಿಕಾರಿಗಳು ಕೂಡ ಕೈಗೆ ಸಿಗುವುದಿಲ್ಲ ಎನ್ನುವುದು ಪ್ರಯಾಣಿಕರ ಅಳಲಾಗಿದೆ.
    ಒಟ್ಟಾರೆಯಾಗಿ ತುಮಕೂರು ಬಸ್ ನಿಲ್ದಾಣ ಪ್ರಯಾಣಿಕರ ಪಾಲಿಗೆ ನರಕ ಸದೃಶವಾಗಿದ್ದು, ಕಳ್ಳರಿಗೆ ಸ್ವರ್ಗದಂತಾಗಿದೆ. ಕೂಡಲೇ ನಿಗಮದ ಅಧಿಕಾರಿಗಳು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪ್ರಯಾಣಿಕರ ಹಿತ ಕಾಯಬೇಕು ಎನ್ನುವುದು ಪ್ರಯಾಣಿಕರ, ವಿದ್ಯಾರ್ಥಿಗಳ ಒತ್ತಾಯವಾಗಿದೆ.

    Verbattle
    Verbattle
    Verbattle
    KSRTC News tumkur ಕಳ್ಳತನ ತುಮಕೂರು
    Share. Facebook Twitter Pinterest LinkedIn Tumblr Email WhatsApp
    Previous Articleಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಹಗರಣಗಳ ತನಿಖೆ..
    Next Article ಶಿವಕುಮಾರ್ ಶಾಲೆಗೆ ಬಾಂಬ್ ಹಾಕುವುದಾಗಿ ಹೇಳಿದ್ದು ಯಾರು ಗೊತ್ತಾ…?
    vartha chakra
    • Website

    Related Posts

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    February 13, 2026

    ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಪಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ: ಏನಿದು ಹೊಸ ವಿವಾದ?

    February 13, 2026

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026

    Comments are closed.

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಪಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ: ಏನಿದು ಹೊಸ ವಿವಾದ?

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    ಕೇವಲ ಗಾಳಿ ಕುಡಿಯಲು ದೆಹಲಿಗೆ ಬಂದಿಲ್ಲ: ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಗರಂ!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • LeonardReawn on ಕೋಗಿಲು ಘಟನೆ ಬಗ್ಗೆ ಮಂತ್ರಿ ಕೃಷ್ಣ ಭೈರೇಗೌಡ ನಿಲುವೇನು?
    • Glennhof on ಜೈಲಿಗಾದರೂ ಹಾಕಿ, ಹೆಂಡತಿ ಮಾತ್ರ ಬೇಡ.
    • LinwoodGah on ಭಾರತಕ್ಕೆ ಇನ್ನೊಬ್ಬ ವೈರಿ ಹುಟ್ಟಿಕೊಂಡನೇ?
    Latest Kannada News

    ಪಿ.ಜಿ.ಗಳಿಗೆ ಬೀಳುತ್ತೇ‌ ಬೀಗ!

    February 13, 2026

    ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದುಪಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ: ಏನಿದು ಹೊಸ ವಿವಾದ?

    February 13, 2026

    ಭೈರತಿ ಬಸವರಾಜ್ ಬಂಧನಕ್ಕೆ ಬಲೆ

    February 12, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.