ತುಮಕೂರು: ಗೋಡೆಯಲ್ಲಿ ಸಿಲುಕಿ ಜೀವ ಭಯದಿಂದ ನರಳಾಡುತ್ತಿದ್ದ ನಾಗರಹಾವನ್ನು ಉರಗತಜ್ಞ ದಿಲೀಪ್ ರಕ್ಷಿಸಿದ್ದಾರೆ.
ತುಮಕೂರು ನಗರದ ರಂಗಾಪುರ ಕನಿಕ ಮಿಲ್ ನಲ್ಲಿ ಗೋಡೆಯ ಪಕ್ಕ ಅರ್ಧಗಂಟೆಗಳ ಕಾಲ ಹೆಡೆ ಬಿಚ್ಚಿ ನಿಂತ ನಾಗರಹಾವು ಜೀವಭಯದಿಂದ ಒದ್ದಾಡುತ್ತಿತ್ತು.
ಬಿರುಕುಬಿಟ್ಟ ಗೋಡೆಯ ಜಾಗದಿಂದ ಸಂಪೂರ್ಣವಾಗಿ ಹೊರಬರಲಾಗದೆ ಇದ್ದ ನಾಗರಹಾವನ್ನು ವಾರಂಗಲ್ ವನ್ಯಜೀವಿ ಜಾಗೃತ ಸಂಸ್ಥೆಯ ಉರಗ ತಜ್ಞ ದಿಲೀಪ್ ಸುರಕ್ಷಿತವಾಗಿ ಸಂರಕ್ಷಣೆ ಮಾಡಿದ್ದಾರೆ. ನಂತರ ಹಾವನ್ನು ಸಮೀಪದ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.