ತುಮಕೂರು : ತುಮಕೂರಿನಲ್ಲಿ ಬೆಂಬೆಳಗ್ಗೆ ಭೀಕರ ಅಪಘಾತ ನಡೆದಿದೆ. ಜವರಾಯನ ಅಟ್ಟಹಾಸಕ್ಕೆ ಇಬ್ಬರು ಮಕ್ಕಳು ಸೇರಿ 9 ಮಂದಿ ಸ್ಥಳಲ್ಲೇ ಪ್ರಾಣ ಬಿಟ್ಟಿದ್ದಾರೆ. 12ಮಂದಿ ಗಾಯಗೊಂಡಿದ್ದಾರೆ. ತುಮಕೂರಿನ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೇನಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ. ಮುಂದಿನ ವಾಹನ ಹಿಂದಿಕ್ಕಲು ಹೋದಾಗ ಹಿಂದಿನಿಂದ ಬಂದ ಲಾರಿ ಕ್ರೂಷರ್ ಗೆ ಡಿಕ್ಕಿಯಾಗಿದೆ. ಶಿರಾ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತರು ಬೆಂಗಳೂರಿನಿಂದ – ರಾಯಚೂರಿ ತೆರಳುತ್ತಿದ್ದ ಟೆಂಪೋ ಟ್ರ್ಯಾಕ್ಸ್ ನಲ್ಲಿ ಇದ್ದವರು. ಬೆಳಗಿನ ಜಾವ ಸರಿಸುಮಾರು 4 .30 ಗಂಟೆಯಲ್ಲಿ ನಡೆದಿರುವ ದುರಂತ ಎನ್ನಲಾಗಿದೆ.
ಮೃತರು ರಾಯಚೂರಿನ ಸಿಂಧೂರಿನ ಮೂಲದವರು, ಮೃತರನ್ನು ಕಷ್ಣಪ್ಪ, ಸುಜಾತ, ವಿನೋದ ನಾಲ್ಕು ವರ್ಷದ ಎರಡು ಹೆಣ್ಣು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಇನ್ನೂ ಗಾಯಗೊಂಡವರನ್ನು ದುರ್ಗಮ್ಮ, ಬಾಲಾಜಿ, ಉಮೇಶ್, ಯಲ್ಲಮ್ಮ, ಅನಿಲ್, ದೇವರಾಜ್, ಮೌನಿಕ, ನಾಗಮ್ಮ, ನಾಗಪ್ಪ, ವಸಂತ, ವೈಶಾಲಿ, ಲಿಲಿತ ಎಂದು ಗುರುತಿಸಲಾಗಿದೆ. ಗಾಯಗೊಂಡವರಿಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ರೂಷರ್ ನಲ್ಲಿದ್ದವರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಬೆಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು.
Previous Articleಕಮೀಷನ್ ಗೂ ಪ್ರಮೋಷನ್ ಕೊಟ್ಟ ಸರ್ಕಾರ…!
Next Article ಬಾಯಿ ಬಿಟ್ಟರೆ ನಾಲಿಗೆ ಕತ್ತರಿಸುತ್ತೇವೆ…!!