ತುಮಕೂರು : ರಾಜ್ಯ ಸರ್ಕಾರ ನೆಹರು ಫೋಟೋ ಕೈ ಬಿಟ್ಟ ವಿಚಾರ ನನಗೆ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ನೆಹರು ಮಾತ್ರ ಕಾರಣರಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಸ್ತೆಗಳು, ಆಸ್ಪತ್ರೆಗಳು ಇಡೀ ರಾಷ್ಟ್ರದ ಉದ್ದಗಲಕ್ಕೂ ನೆಹರು ಕುಟುಂಬದ ಹೆಸರು ಇದೆ. ಇನ್ನೆನು ಗೌರವ ಕೊಡಬೇಕು..? ಈ 75 ವರ್ಷದಲ್ಲಿ ರಾಷ್ಟ್ರಕ್ಕಾಗಿ ದುಡಿದ ನೆಹರೂ ಸಹಿತ ಎಲ್ಲಾ ಮುಖಂಡರನ್ನು ನಾವು ನೆನಪು ಮಾಡಿಕೊಳ್ಳಬೇಕು. ಅಲ್ಲದೆ ರಾಜ್ಯ ಸರಕಾರ ನೆಹರು ಕೈ ಬಿಟ್ಟಿರುವ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ. ಚಾಮರಾಜ ಪೇಟೆಯಲ್ಲಿ ಶಾಂತಿಯುತವಾಗಿ ಧ್ವಜಾರೋಹಣ ನಡೆದಿದೆ. ನಿನ್ನೆ ಸಂಜೆ ನಾನು ಈದ್ಗಾ ಮೈದಾನಕ್ಕೆ ನಾನು ಭೇಟಿ ಕೊಟ್ಟಿದ್ದೆ. ಅಲ್ಲಿಯ ಜನರು ಒಳ್ಳೆಯವರಿದ್ದಾರೆ. ಯಾವ ರಗಳೆ ಇಲ್ಲದೆ ಧ್ವಜಾರೋಹಣ ನಡೆದಿದೆ. ಶಾಸಕ ಜಮೀರ್ ಕೂಡ ಭಾಗವಹಿಸಿದ್ದಾರೆ ಎಂದರು. ಇನ್ನೂ ರಾಷ್ಟ್ರ ಧ್ವಜದ ಹಕ್ಕು ಸ್ವಾಮ್ಯ ಈ ದೇಶದ್ದು. ಕಾಂಗ್ರೆಸ್ ಬಾವುಟದ ಹಕ್ಕು ಸ್ವಾಮ್ಯ ಮಾತ್ರ ಕಾಂಗ್ರೆಸ್ ನದ್ದು. ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ತಾ ಕೂಡ ಈ ದೇಶದ್ದು. ಅದರ ಹಕ್ಕು ಸ್ವಾಮ್ಯ ಕೂಡ ಬಿಜೆಪಿದಲ್ಲ
ಅದು ನಮ್ಮ ಕಾಲದ ಕೊಡುಗೆ ಅಷ್ಟೇ, ಸ್ವಾತಂತ್ರ್ಯ ಹೋರಾಟದ ಕ್ರೆಡಿಟ್ ಜೊತೆಗೆ ರಮೇಶ್ ಕುಮಾರ್ ಹೇಳಿದ ಹಾಗೆ ನಾಲ್ಕು ತಲೆಮಾರಿಗೆ ಸಾಕಾಗುವಷ್ಟು ಲೂಟಿ ಮಾಡಿದ್ದ ಕ್ರೆಡಿಟ್ ಕೂಡ ಕಾಂಗ್ರೆಸ್ಗೆ ಹೋಗಬೇಕು ಎಂದು ಲೇವಡಿ ಮಾಡಿದ್ದಾರೆ. ಆರ್ ಎಸ್ ಎಸ್ ಕಚೇರಿ ಮೇಲೆ ಪ್ರತಿಬಾರಿಯೂ ರಾಷ್ಟ್ರಧ್ವಜ ಹಾರಿದೆ. ರಾಷ್ಟ್ರ ಪ್ರೇಮ ಆರ್ ಎಸ್ ಎಸ್ ಕಲಿಸಿದೆ. ಈ ಬಾರಿ ಮಾತ್ರ ರಾಷ್ಟ್ರ ಧ್ವಜ ಹಾರಿಸಿದ್ದು ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
Previous Articleಕಾಂತಾರದ ಸಿಂಗಾರ ಸಿರಿಯೇ ಹಾಡು ರಿಲೀಸ್
Next Article ಕಾಂಗ್ರೆಸ್ ನವರು ಇತಿಹಾಸ ಸರಿಯಾಗಿ ಓದಿಲ್ಲ: ಮಾಜಿ ಸಿಎಂ