ಉಡುಪಿ: ಪ್ರಪಂಚದಾದ್ಯಂತ ಭಯ ಮತ್ತು ಆತಂಕ ಸೃಷ್ಟಿ ಮಾಡಿರುವ ಮಂಕಿ ಫಾಕ್ಸ್ ವಿಚಾರವಾಗಿ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗುತ್ತಿದೆ. ಈಗಾಗಲೇ WHO ಮಂಕಿ ಫಾಕ್ಸ್ ರೋಗ ವೇಗವಾಗಿ ಹರಡುವ ಕಾರಣಕ್ಕಾಗಿ ಗ್ಲೋಬಲ್ ಹೆಲ್ತ್ ಏಮರ್ಜೇನ್ಸಿ ಘೋಷಿಸಿದೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಮಂಕಿ ಫಾಕ್ಸ್ ಪ್ರಕರಣ ಪತ್ತೆಯಾಗಿಲ್ಲ, ಆದರೆ ಇಲಿ ಜ್ವರ ಜಿಲ್ಲೆಗೆ ಕಾಲಿಟ್ಟಿದೆ ಎನ್ನಲಾಗಿದ್ದು, ಆರೋಗ್ಯ ರೆಡ್ ಅಲರ್ಟ್ ಆಗಿದೆ.
ಹೌದು ಮಂಕಿ ಫಾಕ್ಸ್ ರೋಗ ಸದ್ಯ ತನ್ನ ವೇಗವಾಗಿ ಹರಡುವ ಗುಣದಿಂದಲೇ ಕುಖ್ಯಾತಿ ಪಡೆದಿದೆ. ಇದೇ ಹಿನ್ನಲೆಯಲ್ಲಿ WHO ಈಗಾಗಲೇ ಈ ರೋಗವನ್ನು ಗ್ಲೋಬಲ್ ಹೆಲ್ತ್ ಏಮರ್ಜೇನ್ಸಿ ಘೋಷಿಸಿದೆ. ಸದ್ಯ ಇದೇ ವಿಚಾರವಾಗಿ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದ್ದು, 2019ರ ಕೋವಿಡ್ ನಂತೆ ಮತ್ತೆ ಜಿಲ್ಲೆಯನ್ನು ವ್ಯಾಪಿಸಲಿದೇಯಾ ಎನ್ನುವ ಭಯ ಹುಟ್ಟುಹಾಕಿದೆ. ಈ ಬಗ್ಗೆ ಜನರಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಮಾಹಿತಿ ನೀಡುವ ಮೂಲಕ ಆತಂಕಗೊಳ್ಳದಂತೆ ಮನವಿ ಮಾಡಿದ್ದಾರೆ. ಇಂದು ಸುದ್ದಿಗೋಷ್ಢಿ ಕರೆದ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಮಂಕಿ ಫಾಕ್ಸ್ ಮತ್ತು ಇಲಿ ಜ್ವರದ ಕುರಿತು ಜಿಲ್ಲಾಢಲಿತ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ ಜಿಲ್ಲೆಯಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ವಿದೇಶ ಹಾಗು ಹೊರರಾಜ್ಯದಿಂದ ಬರುವವರ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎನ್ನುವ ಭರವಸೆ ನೀಡಿದರು.