ಕಳೆದ ಶನಿವಾರ ಧಾರಾವಾಹಿ ಕಲಾವಿದೆ, ನಿರೂಪಕಿ, ಬಿಗ್ಬಾಸ್ ಖ್ಯಾತಿಯ ಕಾವ್ಯಾ ಶಾಸ್ತ್ರಿ (Kavya Shastri) ಒಂದು ಟ್ವೀಟ್ ಮಾಡಿದ್ದರು. ನಾನು ಉದಯ ಟಿವಿಯ `ರಾಧಿಕಾ’ ಪಯಣವನ್ನು ಮುಗಿಸಿದ್ದೇನೆ. ಮುಂದೆ ಇನ್ನೂ ಉತ್ತಮ ಹಾಗೂ ದೊಡ್ಡ ಸುದ್ದಿಯೊಂದಿಗೆ ವಾಪಸ್ಸು ಬರುತ್ತೇನೆ. ನಿಮ್ಮೆಲ್ಲರ ಹಾರೈಕೆಗಳಿರಲಿ! ಇದು ಟ್ವೀಟ್ ಸಾರಾಂಶ.
`ರಾಧಿಕಾ’ ಧಾರಾವಾಹಿಯಿಂದ ಕಾವ್ಯಾ ಹೊರಬರುತ್ತಿರುವ ವಿಷಯ ಮೂಲಗಳಿಂದಲೂ ಖಚಿತಪಟ್ಟಿದೆ. ಇದಕ್ಕೆ ಕಾರಣ ನಿರ್ಮಾಪಕರು ಮತ್ತು ಕಾವ್ಯಾ (Kavya Shastri) ನಡುವಿನ ತಿಕ್ಕಾಟವಂತೆ. ನಿರ್ದೇಶಕರ ಜೊತೆಯೂ ಕಾವ್ಯಾ ಚೆನ್ನಾಗಿರಲಿಲ್ಲ ಎಂಬ ವರ್ತಮಾನ ಇದೆ. ವಿಶೇಷ ಎಪಿಸೋಡ್ಗಳಿಗಾಗಿ ಖರ್ಚು ಮಾಡಿ ಸೆಟ್ ಹಾಕಿ ಎಲ್ಲ ಕಲಾವಿದರ ದಿನಾಂಕ ಹೊಂದಿಸಿ ಶೂಟಿಂಗ್ ಫಿಕ್ಸ್ ಮಾಡಿದರೆ, ಬೆಳಗಾಗೆದ್ದು ತಾನು ಶೂಟಿಂಗ್ ಬರುವುದಿಲ್ಲ ಎಂದು ಕಾವ್ಯಾ ಇತ್ತೀಚೆಗೆ ವರಾತ ತೆಗೆದಿದ್ದರಂತೆ. ಇದರಿಂದ ಸಂಘರ್ಷ ತಾರಕಕ್ಕೆ ಏರಿತು ಎನ್ನುವುದು ಒಂದು ಕಡೆಯಿಂದ ಬಂದ ಸುದ್ದಿ. ಮಾತು ಮಾತಿಗೆ ತನ್ನನ್ನು ಬದಲಿಸಿ ಎಂಬ ಧಿಮಾಕಿನ ಮಾತಾಡಿ ಈಗ ಇರುವ ಪಾತ್ರವನ್ನೂ ಕಳೆದುಕೊಂಡಿದ್ದಾರೆ. ಇನ್ನು ಈ ವಯಸ್ಸಿಗೆ ಯಾರು ನಾಯಕಿ ಪಾತ್ರ ಕೊಡುತ್ತಾರೆ? ಹೊಂದಿಕೊಂಡು ಪಾತ್ರ ಮಾಡಬೇಕಿತ್ತು ಎಂದು ಹಿರಿಯ ಕಲಾವಿದರು ಲೊಚಲೊಚ ಅಂತ ಮಾತಾಡುತ್ತಿದ್ದಾರಂತೆ.
ಒಮ್ಮೆ ಡೇಟ್ ಕೊಟ್ಟರೆ ಆ ದಿನಾಂಕದಂದು ಶೂಟಿಂಗ್ ಮಾಡಿಲ್ಲ ಅಂದರೂ ಸಂಭಾವನೆ ಕೊಡಿ. ಇಲ್ಲವೆಂದರೆ ನಾಳೆಯಿಂದ ಶೂಟಿಂಗಿಗೆ ಬರುವುದಿಲ್ಲ ಎಂದು ಕಾವ್ಯಾ ಧಮಕಿ ಹಾಕುತ್ತಿದ್ದರಂತೆ.
ಇನ್ನು ಕಾವ್ಯಾ ಸ್ನೇಹಿತರ (Kavya Shastri) ಬಳಿ ಹೇಳಿಕೊಳ್ಳುತ್ತಿದ್ದುದೇನೆಂದರೆ, ನಿರ್ಮಾಪಕರು ಜಾಸ್ತಿ ಡೇಟ್ಸ್ ತಗೊಳ್ತ ಇರಲಿಲ್ಲ; ಪಾತ್ರಕ್ಕೆ ಒಪ್ಪಿಕೊಳ್ಳುವಾಗ ತಿಂಗಳಲ್ಲಿ 15 ದಿನವಾದರೂ ಶೂಟಿಂಗ್ ಇರುತ್ತೆ ಎಂದು ಮಾತು ಕೊಟ್ಟಿದ್ದರು. ಈಗ 8 ದಿನವೂ ಇರುವುದಿಲ್ಲ. ಹೀಗಿರುವಾಗ ಕಡಿಮೆ ದಿನಕ್ಕೆ ಹೆಚ್ಚು ಸಂಭಾವನೆ ಕೇಳಿದರೆ ತಪ್ಪೇನು? ನಾನು ಯಾವತ್ತೂ ಶೂಟಿಂಗ್, ಡಬ್ಬಿಂಗ್ಗೆ ಕೈ ಕೊಟ್ಟಿಲ್ಲ. ಈಗ ಪಾತ್ರದಲ್ಲಿ ಮುಂದುವರಿಯದಿದ್ದರೂ ಆಗಿರುವಷ್ಟಕ್ಕೆ ಡಬ್ಬಿಂಗ್ ಮುಗಿಸಿ ಕೊಡುತ್ತೇನೆ ಎಂದು ಹೇಳಿದ್ದೇನೆ.. ನನಗೆ ಚಾನೆಲ್ ಜೊತೆ ಸಂಬಂಧ ಮುಖ್ಯ. ನಂದಿನಿ ಧಾರಾವಾಹಿಯಲ್ಲೂ ನಾನು ನಟಿಸಿದ್ದೆ ಎಂದು ಹೇಳಿಕೊಂಡಿದ್ದಾರಂತೆ.
ಒಟ್ಟಿನಲ್ಲಿ ಕಾವ್ಯಾ ಶಾಸ್ತ್ರಿ ಉದಯದ `ರಾಧಿಕಾ’ ಬಿಟ್ಟು ಹೊರನಡೆಯುವುದು ಖಚಿತವಾದಂತಾಗಿದೆ. ಹೊಸ ನಾಯಕಿಗಾಗಿ ಆಡಿಷನ್ಸ್ ನೆಡಿತಾ ಇದೆಯಂತೆ. (Kavya Shastri)
Also read.
ಚನ್ನಗಿರಿ ಕ್ಷೇತ್ರ-ಬಿಜೆಪಿಯ ಗೆಲುವಿನ ಹಾದಿಯಲ್ಲಿ ಕಂದಕವಾದ ಪಕ್ಷೇತರ | Channagiri Assembly Constituency