ಬೆಂಗಳೂರು – ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಫೆಡರೇಷನ್ (FIBA) ಇತಿಹಾಸದಲ್ಲಿ ಕನ್ನಡಿಗ ಒಬ್ಬರು ಹೊಸ ದಾಖಲೆ ಬರೆಯಲು ರಂಗ ಸಜ್ಜುಗೊಂಡಿದೆ.
ವಿವಿಧ ಕ್ರೀಡಾ ಸಂಘಟನೆಗಳ ಪ್ರತಿನಿಧಿಯಾಗಿ ಮನೆ ಮಾತಾಗಿರುವ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಕೆಂಪಾರೆಡ್ಡಿ ಗೋವಿಂದರಾಜ್ (Kempareddy Govindaraju) ಇದೀಗ ಅತ್ಯುನ್ನತ ಸಂಸ್ಥೆಯೊಂದರ ನೇತೃತ್ವ ವಹಿಸಲು ಸದವಕಾಶ ಕೂಡಿಬಂದಿದೆ.

ಅಂತಾರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಫೆಡರೇಷನ್ ನ ಏಷ್ಯಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸದ್ಯದಲ್ಲೇ ಅವರು ಈ ಉನ್ನತ ಸಂಸ್ಥೆಯ ಅಧಿಕಾರ ಸ್ವೀಕರಿಸಲಿದ್ದಾರೆ. (Kempareddy Govindaraju)
ಭಾರತೀಯರೊಬ್ಬರು ಇಂತಹ ಉನ್ನತ ಸಂಸ್ಥೆಯ ಅಧ್ಯಕ್ಷರಾಗುತ್ತಿರುವುದು ಇದೇ ಮೊದಲು ಮೇ 22ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಗೋವಿಂದರಾಜ್ ಅವರು ಮುಂದಿನ ಐದು ವರ್ಷಗಳವರೆಗೆ ಈ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. (Kempareddy Govindaraju)
Also read.

