ಬೆಂಗಳೂರು,ಜು.23-
ಕಾಂಗ್ರೆಸ್ ಮುಖಂಡ ಮತ್ತು ಉದ್ಯಮಿ ಕೆಜಿಎಫ್ ಬಾಬು ಅವರ ವಸಂತನಗರದ ಮನೆಗೆ ಮುಂಜಾನೆ ದಾಳಿ ನಡೆಸಿದ ಆರ್‌ಟಿಒ ಅಧಿಕಾರಿಗಳು ತೆರಿಗೆ ಪಾವತಿಸದ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿಕೊಂಡು ಬಿಸಿ ಮುಟ್ಟಿಸಿದರು.
ಕೆಜಿಎಫ್ ಬಾಬು ಮಾಲೀಕತ್ವದ ಐಷಾರಾಮಿ ಕಾರುಗಳಾದ ರೋಲ್ಸ್ ರಾಯ್ಸ್, ವೆಲ್ವೇರ್ ಸೇರಿದಂತೆ ಹಲವು ಕಾರುಗಳಿಗೆ ತೆರಿಗೆ ಪಾವತಿಸಿಲ್ಲ.
ಆರ್‌ಟಿಓ ಜಂಟಿ ಆಯುಕ್ತ ಶೋಭಾ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ಕಾರುಗಳು ಕರ್ನಾಟಕದಲ್ಲಿ ಓಡಾಡುತ್ತಿದ್ದರೂ, ಇವುಗಳನ್ನು ಇತರ ರಾಜ್ಯಗಳಲ್ಲಿ ನೋಂದಾಯಿಸಲಾಗಿದ್ದು,ರಾಜ್ಯ ರಸ್ತೆ ತೆರಿಗೆಯನ್ನು ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.
ಕರ್ನಾಟಕದ ಮೋಟಾರು ವಾಹನ ಕಾಯ್ದೆಯ ಪ್ರಕಾರ, ರಾಜ್ಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಸುವ ವಾಹನಗಳು ಸ್ಥಳೀಯ ತೆರಿಗೆಯನ್ನು ಪಾವತಿಸಬೇಕು.
ಕೆಜಿಎಫ್ ಬಾಬು ಎಂದೇ ಖ್ಯಾತರಾದ ಯೂಸುಫ್ ಶರೀಫ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ದೊಡ್ಡ ಹೆಸರಾಗಿದ್ದಾರೆ.ಅವರ ಬಳಿ ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಸೇರಿವೆ.
ಬಾಬು ರೋಲ್ಸ್ ರಾಯ್ಸ್ ಕಾರನ್ನು ಅವರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಂದ 2019ರಲ್ಲಿ 6 ಕೋಟಿ ರೂಗೆ ಖರೀದಿಸಿದ್ದರು. ಆದರೆ, ಈ ಕಾರಿನ ನೋಂದಣಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿರಲಿಲ್ಲ ಎಂದು ಆರೋಪವಿದೆ. 2021ರ ಆಗಸ್ಟ್‌ನಲ್ಲಿ ಈ ಕಾರನ್ನು ಆರ್‌ಟಿಓ ಅಧಿಕಾರಿಗಳು ರಸ್ತೆ ತೆರಿಗೆ ಉಲ್ಲಂಘನೆಗಾಗಿ ವಶಪಡಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಆರ್‌ಟಿಓ ತಂಡವು ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಿ ಕಾರುಗಳನ್ನು ಸೀಜ್ ಮಾಡಿದರು
ತೆರಿಗೆ ಪಾವತಿ:
ಇದಾದ ನಂತರ
ಕೆಜಿಎಫ್ ಬಾಬು ಬರೋಬ್ಬರಿ 38 ಲಕ್ಷ ರೂ. ತೆರಿಗೆ ಪಾವತಿ ಮಾಡಿ ಕಾನೂನು ಕ್ರಮದಿಂದ ಪಾರಾಗಿದ್ದಾರೆ.
ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್
ರಿಂದ ಖರೀದಿಸಿದ್ದ ಮತ್ತೊಂದು ರೋಲ್ಸ್ ರಾಯ್ಸ್ ಕಾರಿಗೆ 18.53 ಲಕ್ಷ ರೂ. ಹಾಗೂ ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರಿಗೆ 19.73 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ. ತೆರಿಗೆ ವಸೂಲಿ ಬಳಿಕ ಆರ್ ಟಿಓ ಅಧಿಕಾರಿಗಳು ಬಾಬು ಮನೆಯಿಂದ ತೆರಳಿದ್ದಾರೆ.
Previous Articleಡಿಸಿಎಂ ಶಿವಕುಮಾರ್ ಮೂರು ದಿನ ರಜೆ
Next Article ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !