ನವದೆಹಲಿ
ರಾಜಕಾರಣಿಗಳ ಆಹಾರ, ಉಡುಗೆ- ತೊಡುಗೆಯ ವಿಚಾರಗಳು ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತಿವೆ. ಕೇಂದ್ರದಲ್ಲಿ NDA ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವಂತೂ ಇದು ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಂತೂ ಈ ಬಗ್ಗೆ ಪರ-ವಿರೋಧದ ಚರ್ಚೆ ವ್ಯಾಪಕವಾಗಿ ನಡೆಯುತ್ತದೆ.
ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಉಡುಗೆ ತೊಡುಗೆ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಅದರಲ್ಲೂ ಮೋದಿ ಅವರು ಧರಿಸಿದ್ದ ದುಬಾರಿ ಬೆಲೆಯ ಸೂಟ್ ಭಾರಿ ಸುದ್ದಿ ಮಾಡಿತ್ತು. ನಂತರದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ವೇಳೆ ಧರಿಸಿದ್ದ ಟಿ ಶರ್ಟ್ ವ್ಯಾಪಕ ಚರ್ಚೆಗೆ ಗ್ರಾಸವಾಯಿತು.
ಇದೀಗ Congress ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಶಾಲು ಸುದ್ದಿ ಮಾಡತೊಡಗಿದೆ. ರಾಜ್ಯಸಭೆಯ ಬುಧವಾರದ ಕಲಾಪದಲ್ಲಿ ಪಾಲ್ಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಧರಿಸಿದ್ದ ಶಾಲು ಲೂಯಿ ವುಟಾನ್ (Louis Vuitton) ಬ್ರ್ಯಾಂಡ್ ನದ್ದಾಗಿದ್ದು ಇದರ ಬೆಲೆ 56,332 ರೂಪಾಯಿ ಎನ್ನಲಾಗಿದೆ!
ಈ ವಿಚಾರ BJP ಗರಿಂದ ಟೀಕೆಗೆ ಗುರಿಯಾಗಿದೆ. BJP ರಾಷ್ಟ್ರೀಯ ವಕ್ತಾರರಾದ ಶೆಹಜಾದ್ ಪೂನಾವಾಲಾ (Shehzad Poonawalla) ಈ ಕುರಿತು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ‘ಅನುಸರಿಸುವ ಆಯ್ಕೆಯೊಂದು, ಬೋಧನೆಯೊಂದು’ ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ, ಖರ್ಗೆ ಅವರ ಫೋಟೋ ಹಾಗೂ ಮೋದಿ ಅವರ ಫೋಟೋಗಳನ್ನು ಹೋಲಿಕೆ ಮಾಡಿದ್ದಾರೆ. ಮೋದಿ ಅವರು ಧರಿಸಿದ್ದ waistcoat ಮರುಬಳಕೆ ಪ್ಲಾಸಿಕ್‌ನಿಂದ ತಯಾರಿಸಲಾಗಿದೆ. ಇದು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿಯ ಸೂಚಕದ ಫ್ಯಾಶನ್. ಅದೇ ಖರ್ಗೆ ಅವರ ಶಾಲು? ಈ ಬಗ್ಗೆ ಏನು ಹೇಳಲಾಗುವುದಿಲ್ಲ’ ಎಂದು ಹೇಳಿದ್ದಾರೆ.
ಕಳೆದ ವಾರ ರಾಜ್ಯಸಭಾ ಕಲಾಪದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮರುಬಳಕೆ ಮಾಡಲ್ಪಟ್ಟ ಪ್ಲಾಸ್ಟಿಕ್‌ನಿಂದ ತಯಾರಿಸಿದ ಜಾಕೆಟ್ ಧರಿಸಿದ್ದರು. ಅದೂ ಕೂಡ ಸುದ್ದಿಯಾಗಿತ್ತು.