ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಮತ್ತು ಕ್ರಿಕೆಟಿಗ ಗೆಳೆಯ ಕೆ.ಎಲ್. ರಾಹುಲ್ ವಿವಾದ ಪಕ್ಕಾ ಎನ್ನಲಾಗಿದೆ
ಐಪಿಎಲ್ ಟೀಂ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕ ಮತ್ತು ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಮೂರು ವರ್ಷಗಳಿಂದ ಬಾಲಿವುಡ್ ನಟ ಅಥಿಯಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಆದಾಗಲೇ ತಿಳಿದಿದೆ. ಈಗ ತಿಳಿದು ಬಂದ ಮೂಲದ ಪ್ರಕಾರ ಇವರಿಬ್ಬರ ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಮತ್ತು ರಾಹುಲ್ ಅವರ ಪೋಷಕರು ಇತ್ತೀಚೆಗೆ ಅಥಿಯಾ ಅವರ ಕುಟುಂಬವನ್ನು ಭೇಟಿ ಮಾಡಲು ಮುಂಬೈಗೆ ಆಗಮಿಸಿದ್ದರು. ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಇಬ್ಬರ ವಿವಾಹ ಮುಂಬೈ ನಲ್ಲಿ ನಡೆಯಲಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಕೆ.ಎಲ್. ರಾಹುಲ್ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟಿಗ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು. 30 ವರ್ಷದ ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಾಹುಲ್ ಸುಮಾರು ಒಂದು ತಿಂಗಳ ಕಾಲ ಅಲ್ಲಿಯೇ ಇರುತ್ತಾರೆ ಮತ್ತು ಅಥಿಯಾ ಈ ವೇಳೆ ಅವರ ಜತೆಯಲ್ಲಿರಲಿದ್ದಾರೆ ಎಂದು ಮೂಲವು ಹೇಳಿದೆ.