ಬೆಂಗಳೂರು: ನಗರದ ಹೆಬ್ಬಾಳ ಮೇಲ್ಸೇತುವೆಯಲ್ಲಿ ನಿತ್ಯವೂ ಟ್ರಾಫಿಕ್ ಜಾಮ್ ಆಗುತ್ತಿದ್ದು, ಸ್ಥಗಿತಗೊಂಡಿರುವ ಮೇಲ್ಸೇತುವೆ ಅಗಲೀಕರಣ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕೆಂದು ಶಾಸಕ ಕೃಷ್ಣ ಭೈರೇಗೌಡ ಸಿಎಂ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರದ ಹಾಗು ಫೇಸ್‌ಬುಕ್ ಮೂಲಕ ಮನವಿ ಮಾಡಿರುವ ಅವರು, ಹೆಬ್ಬಾಳ ಮೇಲ್ವೇತುವೆ ಬೆಂಗಳೂರಿನ ಅತಿ ಪ್ರಮುಖ ಪ್ರವೇಶದ್ವಾರವಿದ್ದಂತೆ. ವಾಹನ ಸಂಚಾರ ಅತಿ ಹೆಚ್ಚಾಗುತ್ತಿದ್ದು , ಹಾಲಿ ಮೇಲ್ಸೇತುವೆಯನ್ನು ಅಗಲೀಕರಿಸಿ ಹೆಚ್ಚುವರಿ ಲೇನ್‌ಗಳನ್ನು ನಿರ್ಮಿಸುವ ಕಾಮಗಾರಿ ಸ್ಥಗಿತಗೊಂಡಿದೆ. ಈ ಯೋಜನೆ 2015-16ರಲ್ಲಿ ಮಂಜೂರಾಗಿದ್ದು, ಸುಮಾರು 124.49 ಕೋಟಿ ಹಣವನ್ಜು ಕಾಮಗಾರಿಗಾಗಿ ವೆಚ್ಚ ಮಾಡಲಾಗಿದೆ. ಆದರೆ 2019ರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಮೇಲ್ಸೇತುವೆ ಅಗಲೀಕರಣ ಆಗದೆ ಇರುವುದರಿಂದ ಪ್ರತಿನಿತ್ಯ ಹತ್ತಾರು ಸಾವಿರ ವಾಹನ ಚಾಲಕರು ಮೇಲ್ಸೇತುವೆಯಲ್ಲಿ ಪದೇಪದೆ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ತಮ್ಮ ಗಮನಕ್ಕೆ ತರಲಾಗಿತ್ತು. ಕಾಮಗಾರಿಗೆ ಏಪ್ರಿಲ್‌ನಲ್ಲಿ ಟೆಂಡರ್ ಕರೆಯಲಾಗುವುದು ಹಾಗು ಇದಕ್ಕೆ ಬೇಕಾದ ಅನುದಾನವನ್ನು ನೀಡಲಾಗುವುದು ಎಂದು ತಾವು ಭರವಸೆ ನೀಡಿದ್ದಿರಿ. ಅದರೆ ಈವರೆಗೂ ಟೆಂಡರ್ ಕರೆಯುವ, ಅನುದಾನ ಬಿಡುಗಡೆ ಪ್ರಕ್ರಿಯೆ ಆರಂಭವಾದಂತೆ ಕಾಣುತ್ತಿಲ್ಲ. ತಮ್ಮ ಭರವಸೆಯನ್ನೇ ಅಧಿಕಾರಿಗಳು ಮರೆತಂತೆ ಕಾಣುತ್ತದೆ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಸ್ಥಗಿತಗೊಂಡಿರುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರ ಸಮಸ್ಯೆ ಪರಿಹರಿಸುವಂತೆ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಕಾಮಗಾರಿ ಪುನರಾರಂಭಕ್ಕೆ ಕೃಷ್ಣ ಭೈರೇಗೌಡ ಆಗ್ರಹ
Previous Articleಕೆಜಿಎಫ್ ಹೀರೋಯಿನ್ ಗೆ 7 ಕೋಟಿ ಸಂಭಾವನೆ…?
Next Article ಬೀದರ್, ಶಿವಮೊಗ್ಗದಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ