ಬೆಂಗಳೂರು, ಅ.26 – ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಹೊಂದಿರುವ ಪೆಡೆಂಟ್ ಧರಿಸಿ ಪೊಲೀಸರಿಂದ ಬಂಧನಕ್ಕೊಳಗಾದ ಬೆನ್ನಲ್ಲೇ ಇಂತಹುದೇ ಹಲವು ದೂರುಗಳು ಪೊಲೀಸ್ ಮತ್ತು ಅರಣ್ಯ ವಿಚಕ್ಷಣಾ ದಳವನ್ನು ತಲುಪುತ್ತಿವೆ.
ಇದೀಗ ಇದರ ಸಾಲಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಮಗ ಮತ್ತು ಅಳಿಯ ಸೇರ್ಪಡೆಯಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಂಚಿಕೊಂಡಿರುವ ತಮ್ಮ ಮಗಳ ಮದುವೆಯ ಫೋಟೋ ಆಲ್ಬಮ್‌ಗಳಲ್ಲಿ ಅವರ ಅಳಿಯ ರಜತ್ ಉಳ್ಳಾಗಡ್ಡಿಮಠ ಮತ್ತು ಪುತ್ರ ಮೃಣಾಲ್ ಕೊರಳಲ್ಲಿ ಹುಲಿ ಉಗುರು ಹೊಂದಿರುವ ಪೆಂಡೆಂಟ್ ನ ಸರ ಧರಿಸಿರುವ ಚಿತ್ರಗಳಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಅಂದು ಹರಿದಾಡಿದ್ದ ಈ ಪೋಟೋ ಗಳನ್ನು ಇದೀಗ ನೆಟ್ಟಿಗರು ಜಾಲತಾಣಗಳಲ್ಲಿ ಮತ್ತೆ ಹರಿಯಬಿಟ್ಟಿದ್ದು,ಇವರ ಮೇಲೆ ಕ್ರಮ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಇದೀಗ ಈ ಪೋಟೋ ಗಳನ್ನು ಪರಿಶೀಲನೆ ಮಾಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮಂತ್ರಿ ಹೆಬ್ಬಾಳ್ಕರ್ ಮಗ ಮತ್ತು ಅಳಿಯನಿಗೆ ನೋಟೀಸ್ ಕೊಡಲು ಸಿದ್ದತೆ ನಡೆಸಿದ್ದಾರೆ.


3 Comments
Betano Casino – ОєО±ОёО±ПЃО® О±ПЂПЊО»О±П…ПѓО· ПЂО±О№П‡ОЅО№ОґО№ОїПЌ. О›О¬ОІОµ 100% ОП‰П‚ €500 + 100 ОґП‰ПЃОµО¬ОЅ ПЂОµПЃО№ПѓП„ПЃОїП†ОП‚ https://betanogame.org/el/mobile-app/ ПѓП„О·ОЅ ПЂПЃПЋП„О· ПѓОїП… ОєО±П„О¬ОёОµПѓО·. О— ОєО±О»ПЌП„ОµПЃО· П€П…П‡О±ОіП‰ОіОЇО± П„ОїП… ОєПЊПѓОјОїП… ПѓОµ ПЂОµПЃО№ОјООЅОµО№.
Mostbet: qualidade premium, bГґnus gigante e emoГ§ГЈo 24 horas – https://mostbetpt.pro/pagamento/ , No Mostbet vocГЄ sente na hora que escolheu o cassino certo .
This is what alive feels like at max volume – https://gntopama.com/mostbet-20263/ , One more round and gravity starts taking your orders .