Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಚಿರತೆ ಭಯದಲ್ಲಿ ಕರ್ನಾಟಕ
    ರಾಜ್ಯ

    ಚಿರತೆ ಭಯದಲ್ಲಿ ಕರ್ನಾಟಕ

    vartha chakraBy vartha chakraDecember 2, 2022Updated:December 2, 2022No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಡಿ.2-ರಾಜ್ಯದಲ್ಲಿ ಅರಣ್ಯ ಪ್ರದೇಶ ವಿಸ್ತಾರಗೊಳ್ಳುತ್ತಿರುವ ಸಮಾಧಾನಕರ ಸಂಗತಿಯ ಬೆನ್ನಲ್ಲೇ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
    ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡ ನಗರ ಪಟ್ಟಣಗಳಲ್ಲಿ ಚಿರತೆಗಳು ರಾಜಾರೋಷವಾಗಿ ಓಡಾಡುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿ‌ ಭಯಭೀತಿ ಉಂಟಾಗಿದೆ.
    ಚಿರತೆ ಹಾವಳಿಯನೀಡಲಾಗಿದೆ.ಟ್ಟಲು ಅರಣ್ಯ ಇಲಾಖೆ ನಡೆಸುತ್ತಿರುವ ಪ್ರಯತ್ನ ವ್ಯರ್ಥವಾಗುತ್ತಿದ್ದು ಒಂದು‌ ಬೋನಿಟ್ಟು ಕಾದು ಚಿರತೆಯನ್ನು ಸೆರೆಹಿಡಿದು ನಿಟ್ಟುಸಿರು ‌ಬಿಡುವಷ್ಟರಲ್ಲಿ ಮತ್ತೊಂದು ‌ಕಡೆ ಚಿರತೆತ ಕಾಟ ಆರಂಭಗೊಳ್ಳುತ್ತಿದೆ.
    ಮೈಸೂರಿನ ಬೃಂದಾವನ ಬಳಿ ಚಿರತೆ ಕಾಣಿಸಿಕೊಂಡು‌ ಸತತ ಒಂದು ತಿಂಗಳ ಕಾಲ
    ಸಾರ್ವಜನಿಕರಿಗೆ ನಿಷೇಧ ವಿಧಿಸಿ ಬೋನಿಟ್ಟು‌ ಕಾದರೂ ಚಿರತೆ ಕಣ್ಣಾಮುಚ್ಚಾಲೆ ಆಡಿ ಅರಣ್ಯ ಇಲಾಖೆಯವರನ್ನು ಯಾಮಾರಿಸಿದೆ.
    ಕಂಡಲ್ಲಿ ಗುಂಡು:
    ಈ‌ ನಡುವೆ ಮೈಸೂರಿನ ಟಿ ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿಗೆ ಎರಡನೇ ಬಲಿಯಾದ ಬೆನ್ನಲ್ಲೇ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಅರಣ್ಯ ಇಲಾಖೆಯ ಸೂಚನೆ ನೀಡಿದೆ.
    ಕಳೆದ ಕೆಲ ತಿಂಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಇದೀಗ ಎರಡನೇ ಬಲಿ ಪಡೆದಿದೆ. ನಿನ್ನೆ ಸಂಜೆ ಟಿ.ನರಸೀಪುರ ತಾಲೂಕಿನಲ್ಲಿ ಕಾಲೇಜು ಯುವತಿ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತು. ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ. ಕಳೆದ ತಿಂಗಳು ಯುವಕನೋರ್ವನನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿತ್ತು. ಹಾಗಾಗಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನೆಲೆ ಅರಣ್ಯ ಇಲಾಖೆ ಚಿರತೆಗೆ ಕಂಡಲ್ಲಿ ಗುಂಡು ಹಾರಿಸಲು ಸೂಚಿಸಿದೆ.
    ಚಿರತೆ ಸೆರೆಗೆ ಹರಸಾಹಸ:
    ಚಿರತೆ ಕಂಡು ಬಂದಲ್ಲಿ ಗುಂಡು ಹಾರಿಸಲು ಡಿಸಿಎಫ್ ಕಮಲ ಕರಿಕಾಲನ್ ಸೂಚನೆ ಹೊರಡಿಸಿದ್ದಾರೆ. ಜೊತೆಗೆ ಚಿರತೆ ದಾಳಿಯಿಂದ ಮೃತಪಟ್ಟ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕುಟುಂಬಕ್ಕೆ 5 ವರ್ಷಗಳ ಕಾಲ 2 ಸಾವಿರ ರೂ. ಮಾಸಾಶನ. ಕುಟುಂಬದ ಒಬ್ಬ ಸದಸ್ಯರಿಗೆ ಹೊರ ಗುತ್ತಿಗೆ ಆಧಾರದಡಿ ಕೆಲಸ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೇ ಟಿ. ನರಸೀಪುರ ಎಫ್‍ಆರ್‌ಓಗೆ ಕಡ್ಡಾಯ ರಜೆ ನೀಡಿ ಈ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಿದ್ದು, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
    ಕೆಂಗೇರಿ ಜನತೆಗೆ ಆತಂಕ:
    ನಗರದ ತುರಹಳ್ಳಿ ಬಳಿ ಜಿಂಕೆಯನ್ನ ಬೇಟೆಯಾಡಿರುವ ಚಿರತೆಯ ವಿಡಿಯೋ ವೈರಲ್ ಆದ ನಂತರ ಜನರು ಭಯಭೀತರಾಗಿದ್ದಾರೆ.
    ಕೆಂಗೇರಿ ಸಮೀಪದ ಕೋಡಿಪಾಳ್ಯ, ಚಟ್ಟಿಪಾಳ್ಯ ನಿವಾಸಿಗಳಲ್ಲಿ ಭೀತಿ ಹೆಚ್ಚಿಸಿದೆ. ತುರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡು ಕಗ್ಗಲೀಪುರ-ತುರಹಳ್ಳಿ ಅರಣ್ಯ ಪ್ರದೇಶವಿದ್ದು, ಸೋಂಪುರ, ಶ್ರೀನಿವಾಸಪುರ, ಆರ್​.ಆರ್​.ನಗರ, ಮೈಲಸಂದ್ರ, ಕೋಡಿಪಾಳ್ಯ, ಗೆಟ್ಟಿಗರಹಳ್ಳಿಯನ್ನ ಸುತ್ತುವರಿದಿದೆ. ಈ ಅರಣ್ಯ ಪ್ರದೇಶವು 514.26 ಎರಕೆ ವಿಸ್ತೀರ್ಣದಲ್ಲಿದೆ. ಐಟಿಸಿ ಪ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಇಂದು ಸಹ‌ ಚೀತಾ ಕೂಂಬಿಂಗ್ ಮುಂದುವರೆಯಲಿದೆ.
    ಒಂಟಿ ಓಡಾಡದಂತೆ ಸೂಚನೆ:
    ಎರಡು ತಂಡಗಳಿಂದ ಚಿರತೆಯ ಚಲನ ವಲನಗಳ‌ ಮೇಲೆ ನಿಗಾ ಇಡಲಾಗಿದ್ದು ಒಬ್ಬೊಬ್ಬರೇ ಓಡಾಡದಂತೆ ಸೂಚನೆ ಅಧಿಕಾರಿಗಳು ಸೂಚನೆ ನೀಡಲಾಗಿದೆ. ಈ ಭೀತಿಯ ನಡುವೆಯೂ ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿಲ್ಲ. ಅಂಗಡಿ ಮಾಲೀಕರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿದ್ದಾರೆ. ತುರಹಳ್ಳಿಯಲ್ಲಿ ಚಿರತೆ ದಾಳಿ ನಡೆಸಿದ ರಸ್ತೆಯತ್ತ ಜನರ ಸಂಚಾರ ಸ್ಥಗಿತಗೊಂಡಿದೆ. ಇಡೀ ರಸ್ತೆ ಸಂಪೂರ್ಣ ಖಾಲಿಯಾಗಿದೆ.
    ಮುಂಜಾನೆ ವಾಕಿಂಗ್ ಬರುತ್ತಿದ್ದವರೆಲ್ಲಾ ತಡವಾಗಿ ರಸ್ತೆಗೆ ಇಳಿದಿದ್ದಾರೆ. ಇನ್ನೊಂದೆಡೆ ತುರಹಳ್ಳಿ ಪ್ರದೇಶ ಸುತ್ತಲೂ ಸಾಕಷ್ಟು ಬಡವಾಣೆಗಳಿದ್ದು, ಜನವಸತಿ ಪ್ರದೇಶವಾಗಿದೆ. ಇಲ್ಲಿಗೆ ಚಿರತೆ ನುಗ್ಗದಂತೆ ಎಚ್ಚರವಹಿಸುವುದು ಅವಶ್ಯಕವಾಗಿದೆ. ಸಾಧ್ಯವಾದಷ್ಟು ಬೇಗ ಚಿರತೆ ಸೆರೆಹಿಡಿದು ಕಾಡಿಗೆ ಶಿಫ್ಟ್ ಮಾಡಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ತುರಹಳ್ಳಿ ಅರಣ್ಯದೊಳಗೆ ವಾಕಿಂಗ್ ಮಾಡದಂತೆ ಸೂಚನೆ ನೀಡಲಾಗಿದೆ.

    ಕಾಲೇಜು ವೈರಲ್ Business
    Share. Facebook Twitter Pinterest LinkedIn Tumblr Email WhatsApp
    Previous ArticlePrevious Post
    Next Article Saleem Effect ಹೇಗಿದೆ ನೋಡಿ!
    vartha chakra
    • Website

    Related Posts

    ಉಪನ್ಯಾಸಕರಲ್ಲ ಇವರು ರಾಕ್ಷಸರು.

    July 15, 2025

    ಪೊಲೀಸ್ ಆಡಳಿತಕ್ಕೆ ಮೇಜರ್ ಸರ್ಜರಿ.

    July 15, 2025

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    July 7, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • События сегодня on ಮುರುಘಾ ಶರಣರ ವಿರುದ್ಧ ಆರೋಪ ಪಟ್ಟಿ
    • Ralphhow on ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    • mostbet_cfki on ಮೋದಿ ಮೂದಲಿಸಿದವರು ಮಾಲ್ಡೀವ್ಸ್ ಸರ್ಕಾರದಿಂದ ಹೊರಕ್ಕೆ | Maldives
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe