ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಭಾಷಾ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಮತ್ತು ಮತಿಯ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ವೈಶಿಷ್ಟ್ಯಮಯವಾದ ಕ್ಷೇತ್ರವಾಗಿದೆ.
ಐಟಿ ಉದ್ಯೋಗಿಗಳು, ತಳ್ಳುಗಾಡಿ Businessಿಗಳು ಸಮ- ಸಮ ಪ್ರಮಾಣದಲ್ಲಿರುವ ಈ ಕ್ಷೇತ್ರದಲ್ಲಿ ವಿದ್ಯಾವಂತರು ಹೆಚ್ಚಾಗಿದ್ದಾರೆ ಹಾಗೆ ಅಷ್ಟೇ ಪ್ರಮಾಣದಲ್ಲಿ ಅವಿದ್ಯಾವಂತರೂ ಕೂಡ ಇದ್ದಾರೆ. ಸಿರಿವಂತರು ಮತ್ತು ಕೊಳಗೇರಿ ನಿವಾಸಿಗಳು ಸಮ ಪ್ರಮಾಣದಲ್ಲಿ ಕಂಡು ಬರುತ್ತಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದೆ. ಪ್ರತಿ Electionಯಲ್ಲಿ ಈ ಪಕ್ಷದ ಉತ್ತಮಗೊಳ್ಳುತ್ತಾ ಸಾಗಿದೆ. ಕಳೆದ ಮೂರು ಚುನಾವಣೆಗಳಲ್ಲೂ ಈ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಲೋಕಸಭೆಯಲ್ಲಿ ಮಾತ್ರ ಬಿಜೆಪಿ ಆಯ್ಕೆಯಾಗುತ್ತಾ ಬಂದಿರುವುದು ಆಶ್ಚರ್ಯ ಮೂಡಿಸಿದೆ.
ಈ ಚುನಾವಣೆಯಲ್ಲಿ ಬಿಜೆಪಿಯಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ಪಿ ಸಿ ಮೋಹನ್ ಮರು ಆಯ್ಕೆ ಬಯಸಿದ್ದಾರೆ. ದಕ್ಷಿಣ ಭಾರತದ ಏಕೈಕ ಹಿಂದುಳಿದ ವರ್ಗಗಳ ಸಂಸದ ಎಂಬ ಹೆಗ್ಗಳಿಕೆಯೊಂದಿಗೆ, ಕಣದಲ್ಲಿರುವ ಅವರು ಕ್ಷೇತ್ರದಲ್ಲಿ ಕೆಲವು ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜಾರಿಗೊಳಿಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.
ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಪಿಸಿ ಮೋಹನ್ ರವರು ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವನ್ನು ಹೊಂದಿದ್ದು ನಾಲ್ಕನೆಯ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ನಾಲ್ಕನೇ ಬಾರಿ ಸಂಸದರಾಗುವ ಕನಸು ಕಾಣುತ್ತಿರುವ ಪಿಸಿ ಮೋಹನ್ ಅವರಿಗೆ ಈ ಬಾರಿ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಎದುರಾಗಿದೆ. ಶಿಕ್ಷಣ ತಜ್ಞ ಯುವ ಕಾಂಗ್ರೆಸ್ ಮುಖಂಡ ಮನ್ಸೂರ್ ಅಲಿ ಖಾನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದೊಡ್ಡ ಪ್ರಮಾಣದ ಬೆಂಬಲಿಗರು, ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಹೊಂದಿರುವ ಇವರ ಸ್ಪರ್ಧೆ ಕ್ಷೇತ್ರದ ಚಿತ್ರಣವನ್ನು ಬದಲಾಯಿಸಿದೆ.
ಈ ಲೋಕಸಭೆ ಕ್ಷೇತ್ರದಲ್ಲಿ ಪ್ರತಿಷ್ಠಿತ ಐಟಿ ಕಂಪನಿಗಳು ಇವೆ. ಪಂಚತಾರಾ ಹೋಟೆಲ್ ಗಳು ಸಾಕಷ್ಟು ಪ್ರಮಾಣದಲ್ಲಿವೆ. ಇದರ ಜೊತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಳ ಮಧ್ಯಮ ವರ್ಗದ ಜನತೆ ನೆಲೆಸಿದ್ದು ನಾಗರೀಕ ಸಮಸ್ಯೆಗಳು ಕೂಡ ದೊಡ್ಡ ಸಮಸ್ಯೆಯಾಗಿ ಕಾಡುತ್ತಿವೆ.
ಚುನಾವಣೆಯಲ್ಲಿ ಮತಯಾಚಿಸಲು ತೆರಳುತ್ತಿರುವ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಒಳಚರಂಡಿ ವ್ಯವಸ್ಥೆ, ಪಾದಚಾರಿ ಮಾರ್ಗಗಳ ಅವ್ಯವಸ್ಥೆ, ವಾಹನ ನಿಲುಗಡೆ, ಸಂಚಾರ ದಟ್ಟಣೆ ಮೊದಲಾದ ಸಮಸ್ಯೆಗಳು ರಾಚುತ್ತಿವೆ. ಬಹುಕಾಲದಿಂದ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದ ಪರಿಣಾಮ ಈಗ ನಗರ ಸಮಸ್ಯೆಗಳ ಬಗ್ಗೆ ಉತ್ತರ ನೀಡುವ ಅನಿವಾರ್ಯತೆ ಸಂಸದರ ಪಾಲಿಗೆ ಬಂದಿದೆ.
ರಾಜ ಕಾಲುವೆಗಳ ಒತ್ತುವರಿ, ಕೆರೆಗಳ ಅವ್ಯವಸ್ಥೆ, ಸಂಚಾರ ದಟ್ಟಣೆ, ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಚರ್ಚೆಗೆ ಬರುತ್ತಿದೆ ಲೋಕಸಭಾ ಸದಸ್ಯರು ಇದಕ್ಕೆಲ್ಲ ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ದತ್ತ ಬೊಟ್ಟು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಈ ಸಮಸ್ಯೆಗಳಿಗೆ ಕಾರಣ ಎಂದು ಪ್ರತ್ಯುತ್ತರ ನೀಡುತ್ತಿದೆ. ಹೀಗಾಗಿ ಚುನಾವಣೆ ಎರಡು ಪಕ್ಷಗಳ ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪುರುಷರು 11.50 ಲಕ್ಷ ಹಾಗೂ ಮಹಿಳೆಯರು 10.58 ಲಕ್ಷ ಒಳಗೊಂಡು ಒಟ್ಟು 23 ಲಕ್ಷ ಮತದಾರರಿದ್ದಾರೆ. ಮುಸ್ಲಿಂ, ಕ್ರೈಸ್ತ, ದಲಿತ ಹಾಗೂ ಹಿಂದುಳಿದ ವರ್ಗದ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕೆಲವು ಅಂಕಿ-ಅಂಶಗಳ ಪ್ರಕಾರ ಜಾತಿವಾರು ಪ್ರಾತಿನಿಧ್ಯದಲ್ಲಿ 6 ಲಕ್ಷ ಮುಸ್ಲಿಮರು, 5 ಲಕ್ಷ ಕ್ರೈಸ್ತರು, 5 ಲಕ್ಷ ದಲಿತರು ಹಾಗೂ ಬಲಿಜಿಗ, ಗೊಲ್ಲ, ಕುರುಬ, ತಿಗಳ, ವಿಶ್ವಕರ್ಮ, ಮಡಿವಾಳ, ಕಮ್ಮ ಇತ್ಯಾದಿ ಹಿಂದುಳಿದ ವರ್ಗದವರು ಸುಮಾರು 6 ಲಕ್ಷ ಜನರಿದ್ದಾರೆ. ಶಿವಾಜಿನಗರ, ಹಲಸೂರು, ಶೇಷಾದ್ರಿಪುರ, ಗಾಂಧಿನಗರ ಭಾಗದಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.
ಕ್ಷೇತ್ರದ ವ್ಯಾಪ್ತಿಯ ಶಿವಾಜಿನಗರ, ಸರ್ವಜ್ಞನಗರ ಚಾಮರಾಜಪೇಟೆ ಶಾಂತಿನಗರ ಮತ್ತು ಗಾಂಧಿನಗರ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ಸಿನ ಭದ್ರ ಕೋಟೆಗಳಾಗಿವೆ. ಅದೇ ರೀತಿ ಮಹದೇವಪುರ ಮತ್ತು ಸಿ.ವಿ. ರಾಮನ್ ನಗರ, ರಾಜಾಜಿನಗರ ಬಿಜೆಪಿಯ ಭದ್ರಕೋಟೆಯಾಗಿದೆ.
ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿ ಗಮನಿಸಿದಾಗ ಕಾಂಗ್ರೆಸಿಗೆ ಅನುಕೂಲಕರ ವಾತಾವರಣ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ ಆದರೂ ಮತದಾರರು ನೀಡುವ ತೀರ್ಪು ಅಚ್ಚರಿ ಮೂಡಿಸುತ್ತದೆ .ಪ್ರತಿ ಚುನಾವಣೆಯಲ್ಲೂ ಈ ಕ್ಷೇತ್ರ ಕಾಂಗ್ರೆಸ್ಸಿಗೆ ಒಲಿಯಲಿದೆ ಎಂದು ಹೇಳಲಾಗುತ್ತದೆ ಯಾಕೆಂದರೆ ಕ್ಷೇತ್ರದಲ್ಲಿರುವ ಮತದಾರರ ಒಲವು ನಿಲುವುಗಳನ್ನು ಗಮನಿಸಿದಾಗ ಎಂಥವರು ಕೂಡ ಇದು ಕಾಂಗ್ರೆಸ್ಸಿಗೆ ಅತ್ಯಂತ ಸುರಕ್ಷಿತ ಕ್ಷೇತ್ರ ಎಂದು ಹೇಳಬಹುದು ಆದರೆ ಮತ ಚಲಾವಣೆಯಾಗಿ ಎಣಿಕೆ ಮಾಡಿದ ಕ್ಷಣ ಹೊರ ಬರುವ ತೀರ್ಪು ಬೇರೆಯಾಗಿರುತ್ತಿದೆ ಮೂರು ಬಾರಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಅದೇ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರ ಪರವಾದ ಅಲೆ ಅಯೋಧ್ಯೆಯಲ್ಲಿನ ರಾಮಮಂದಿರ ಮೊದಲಾದ ವಿಷಯಗಳು ತಮ್ಮ ಬೆಂಬಲಕ್ಕೆ ನಿಲ್ಲಲಿವೆ ಎಂಬುದು ಅವರ ಲೆಕ್ಕಾಚಾರವಾಗಿದೆ.
ಆದರೆ ಕಾಂಗ್ರೆಸ್ ಅಭ್ಯರ್ಥಿಯ ಲೆಕ್ಕಾಚಾರ ಬೇರೆಯಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದು ಇದು ಜಾರಿಗೊಳಿಸಿರುವ ಗ್ಯಾರಂಟಿಗಳ ಫಲಾನುಭವಿಗಳು ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅವರೆಲ್ಲರೂ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಅಲ್ಪಸಂಖ್ಯಾತ ದಲಿತ ಮತ್ತು ಕೆಳ ಮಧ್ಯಮ ವರ್ಗದವರು ಕಾಂಗ್ರೆಸ್ ಪರವಾಗಿ ಒಲವು ಹೊಂದಿದ್ದಾರೆ ಅಡುಗೆ ಅನಿಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಈ ಜನರನ್ನು ಹೈರಾಣ ಗೊಳಿಸಿದೆ ಸ್ಥಳೀಯ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿದ್ದು ಇವುಗಳ ಬಗ್ಗೆ ಪ್ರಸ್ತಾಪಿಸಲು ಸಂಸದರು ಕೈಗೆ ಸಿಗುವುದೇ ಇಲ್ಲ ಎಂಬ ಅಪಸ್ವರವಿದೆ ಈ ಆಡಳಿತ ವಿರೋಧಿ ಅಲೆ ತಮಗೆ ಅನುಕೂಲಕರ ಎಂದು ಭಾವಿಸುತ್ತಾರೆ.
ಕ್ಷೇತ್ರದ ಬಹುತೇಕ ಕಡೆ ಕಾಂಗ್ರೆಸ್ ಪರವಾಗಿ ವಾತಾವರಣ ಕಾಣುತ್ತಿದೆಯಾದರೂ ಮತಗಳ ಕ್ರೂಢೀಕರಣ ಮತ್ತು ವಿಭಜನೆ ದೊಡ್ಡ ಸವಾಲಾಗಿದೆ.
ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಕಣಕ್ಕೆ ಇಳಿದಿದ್ದರು ಮತ್ತೊಂದು ಕಡೆ ಜೆಡಿಎಸ್ ನಿಂದ ಜಮೀರ್ ಅಹಮದ್ ಖಾನ್ ಕಣದಲ್ಲಿದ್ದು ಎರಡು ಲಕ್ಷಕ್ಕೂ ಅಧಿಕ ಮತ ಪಡೆದಿದ್ದರು ಹೀಗಾಗಿ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಗಿಂತ 35 ಸಾವಿರ ಅಧಿಕ ಮತ ಗಳಿಸಿ ಆಯ್ಕೆಯಾಗಿದ್ದರು ಇಲ್ಲಿ ಜೆಡಿಎಸ್ ಗಮನಾರ್ಹ ಸಾಧನೆ ಮಾಡಿತ್ತು. ಅದೇ ರೀತಿಯಲ್ಲಿ 2014 ಮತ್ತು 2019 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ಸ್ಪರ್ಧೆ ಮಾಡಿದ್ದು ಬಿಜೆಪಿ ಬಹು ಸಂಖ್ಯಾತ ಮತಗಳನ್ನು ಕ್ರೂಡೀಕರಿಸುವಲ್ಲಿ ಯಶಸ್ವಿಯಾಗಿತ್ತು ಈ ಎರಡು ಚುನಾವಣೆಗಳಲ್ಲಿ ಕಣ ದಲ್ಲಿದ್ದ ಜೆಡಿಎಸ್ ಮತ್ತು ಆಮ್ ಆದ್ಮಿ ಪಾರ್ಟಿಗಳು ಗಮನಾರ್ಹ ಸಂಖ್ಯೆಯಲ್ಲಿ ಮತಗಳನ್ನು ಪಡೆದಿದ್ದವು.
ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ ಸಚಿವರಾದ ಜಮೀರ್ ಅಹಮದ್ ಖಾನ್, ಕೆಜೆ ಜಾರ್ಜ್, ದಿನೇಶ್ ಗುಂಡೂರಾವ್ ತಮ್ಮ ಅಭ್ಯರ್ಥಿಯ ಗೆಲುವಿಗೆ ಪಣ ತೊಟ್ಟಿದ್ದಾರೆ ಈ ಕ್ಷೇತ್ರದಲ್ಲಿ ಎರಡು ಬಾರಿ ಸೋತಿರುವ ರಿಜ್ವಾನ್ ಅರ್ಷದ್ ಅವರು ಕಾಂಗ್ರೆಸ್ ಗೆಲುವಿಗೆ ಟೊಂಕ ಕಟ್ಟಿ ದುಡಿಯುತ್ತಿರುವುದು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ ಹೆಚ್ಚಿನ ಬಲತಂದುಕೊಟ್ಟಿದೆ. ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಮೈ ಚಳಿ ಬಿಟ್ಟು ಕಾಂಗ್ರೆಸ್ ಪರವಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದೆ ಆದಲ್ಲಿ ಕ್ಷೇತ್ರದ ಚುನಾವಣೆಯ ಫಲಿತಾಂಶ ಸಂಪೂರ್ಣ ಬದಲಾಗಲಿದೆ