ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗಾಂಧಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ನಡೆಸಿದರು.
ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಅವರೊಂದಿಗೆ ಕ್ಷೇತ್ರದ ಹಲವೆಡೆ ಮತ ಯಾಚಿಸಿದ ಅವರು ಮೈದಾನದಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಡಿ ತಾವು ಕೇವಲ ರಾಜಕಾರಣಿ ಮಾತ್ರವಲ್ಲ ತಾವೊಬ್ಬ ಕ್ರೀಡಾಪಟು ಕೂಡಾ ಎಂದರು.
ಚುರುಕಿನ ಆಟ ಕ್ರಿಕೆಟ್ ನಲ್ಲಿ ಬೌಂಡರಿ ಪಂದ್ಯದ ದಿಕ್ಕನ್ನೇ ಬದಲಾಯಿಸುತ್ತದೆ.ಹಾಗೇಯೇ ನಾವೆಲ್ಲರೂ ಕಾಂಗ್ರೆಸ್ ಪರ ಮತ ಎನ್ನುವ ಬೌಂಡರಿ ಬಾರಿಸುವ ಮೂಲಕ ಬದಲಾವಣೆ ತರಬೇಕು ಎಂದು ಮನವಿ ಮಾಡಿದರು.