Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೊರೊನಾಗಿಂತ ಹೆಚ್ಚು ಅಪಾಯಕಾರಿಯಾದ Marburg ವೈರಸ್ ಪತ್ತೆ – ದೃಢಪಡಿಸಿದ WHO
    ಆರೋಗ್ಯ

    ಕೊರೊನಾಗಿಂತ ಹೆಚ್ಚು ಅಪಾಯಕಾರಿಯಾದ Marburg ವೈರಸ್ ಪತ್ತೆ – ದೃಢಪಡಿಸಿದ WHO

    vartha chakraBy vartha chakraFebruary 16, 202345 Comments2 Mins Read
    Facebook Twitter WhatsApp Pinterest LinkedIn Tumblr Email
    PC - BBC
    Share
    Facebook Twitter LinkedIn Pinterest Email WhatsApp

    PC – BBC

    ಕೋವಿಡ್ ನ ಕರಾಳ ದಿನಗಳು ಕಳೆದು, ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ಸಮಾಧಾನದ ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೆ, ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಪಷ್ಟಪಡಿಸಿದ ಸುದ್ದಿಯೊಂದು ಮತ್ತೆ ಆತಂಕ ಹುಟ್ಟಿಸಿದೆ.

    ಆಫ್ರಿಕಾದ ಈಕ್ವಟೋರಿಯಲ್ ಗಿನಿಯಲ್ಲಿ (Equatorial Guinea, Africa) ಎಬೋಲಾ ವೈರಸ್ (Ebola virus) ಕುಟುಂಬಕ್ಕೆ ಸೇರಿದ ಮಾರ್ಬರ್ಗ್ ವೈರಸ್ (Marburg virus) ಪತ್ತೆಯಾಗಿದ್ದನ್ನು WHO ದೃಢಪಡಿಸಿದೆ. ಈ ಸೋಂಕಿನ ಗುಣಲಕ್ಷಣಗಳನ್ನು ಹೊಂದಿದ್ದ 9 ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಮೃತ ಪಟ್ಟ 9 ಜನರಲ್ಲಿ ಒಬ್ಬರಲ್ಲಿ ಮಾರ್ಬರ್ಗ್ ಸೋಂಕು ದೃಢಪಟ್ಟಿದೆ. 16 ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಪ್ರಾಥಮಿಕ ಸಂಪರ್ಕ ಹೊಂದಿದ್ದ 21 ಜನರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ವರದಿಯಾಗಿದೆ.

    ಏನಿದು ಮಾರ್ಬರ್ಗ್ ವೈರಸ್? 

    ಮಾರ್ಬರ್ಗ್ ವೈರಸ್ ಎಬೋಲಾ ವೈರಸ್ ಕುಟುಂಬಕ್ಕೆ ಸೇರಿದ RNA ವೈರಸ್. ಇದರಿಂದ ಉಂಟಾಗುವ ಸೋಂಕಿಗೆ ಮಾರ್ಬರ್ಗ್ ಸೋಂಕು (Marburg disease) ಎನ್ನುತ್ತಾರೆ. ಎಬೋಲಾದಂತೆ, ಮಾರ್ಬರ್ಗ್ ವೈರಸ್ ಬಾವಲಿ (bats) ಗಳಲ್ಲಿ ಹುಟ್ಟುತ್ತದೆ.

    ಮಾರ್ಬರ್ಗ್ ಸೋಂಕು ಎಷ್ಟು ಅಪಾಯಕಾರಿ? 

    ಇದು ಒಂದು ಅಪರೂಪದ ಸೋಂಕಾದರೂ, ಭೀಕರ ಸಾವಿನ ಪ್ರಾಮಾಣವನ್ನು ಹೊಂದಿದೆ. ವರದಿಯ ಪ್ರಕಾರ, ಇದು 88% ವರೆಗಿನ ಸಾವಿನ ಅನುಪಾತವನ್ನು ಹೊಂದಿದೆ.

    ಇದರ ಲಕ್ಷಣಗಳು

    WHO ಪ್ರಕಾರ, ಹೆಚ್ಚು ತಾಪಮಾನದ ಜ್ವರ, ತೀವ್ರ ತಲೆನೋವು ಮತ್ತು ತೀವ್ರ ಅಸ್ವಸ್ಥತೆ ಈ ಸೋಂಕಿನ ಲಕ್ಷಣಗಳಾಗಿವೆ. ಮತ್ತು, ಇವು ಧಿಡೀರನೆ ಕಾಣಿಸಿಕೊಳ್ಳಬಹುದು ಎಂದೂ ತಿಳಿಸಿದೆ. ಇತರ ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ಹೊಟ್ಟೆ ನೋವು ಮತ್ತು ಸೆಳೆತ, ವಾಕರಿಕೆ, ವಾಂತಿ ಮತ್ತು ಅತಿಸಾರ.

    ಇದು ಸಾಂಕ್ರಾಮಿಕವೇ?

    ಹೌದು. ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕಿತ ಜನರ ರಕ್ತ, ಅಂಗಗಳು ಅಥವಾ ಇತರ ದೈಹಿಕ ದ್ರವಗಳ ನೇರ ಸಂಪರ್ಕದ ಮೂಲಕ ಮತ್ತು ಕಲುಷಿತ ಮೇಲ್ಮೈಗಳು ಮತ್ತು ವಸ್ತುಗಳಿಂದ ಜನರ ನಡುವೆ ವೈರಸ್ ಹರಡಬಹುದು.

    ಚಿಕಿತ್ಸೆ

    WHO ಹೇಳುವಂತೆ, ಪ್ರಸ್ತುತದಲ್ಲಿ ಈ ಸೋಂಕನ್ನು ನಿವಾರಿಸುವ ಯಾವ ವ್ಯಾಕ್ಸಿನ್ ಗಳೂ ಲಭ್ಯವಿಲ್ಲ. ದೇಹವನ್ನು ಪುನರ್ಜಲೀಕರಣ ಗೊಳಿಸುವುದು, ಆಮ್ಲಜನಕದ ಮಟ್ಟವನ್ನು ನಿರ್ವಹಿಸುವುದು ಮತ್ತು ನಿರ್ದಿಷ್ಟ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದಷ್ಟೇ ಸದ್ಯಕ್ಕಿರುವ ಚಿಕಿತ್ಸೆ ಎನ್ನುತ್ತದೆ WHO.

     

     

    Bats BBC guinea m Marburg virus west africa WHO ಆರೋಗ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಚುನಾವಣೆ ಮೇಲೆ CM ಕಣ್ಣು – ಬಜೆಟ್ ನಲ್ಲಿ ಎಲ್ಲರಿಗೂ ಬೆಣ್ಣೆ ಸಾಧ್ಯತೆ
    Next Article ಕೋವಿ ಹಿಡಿದುಕೊಂಡು ಬನ್ನಿ ಮಂತ್ರಿಗಳೇ!
    vartha chakra
    • Website

    Related Posts

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    December 12, 2025

    ಮರಣದ ಕಾರಣ ಹೇಳುವುದು ಕಡ್ಡಾಯ

    December 9, 2025

    ಸಾಲದಲ್ಲಿ ಮುಳುಗುತ್ತಿದ್ದಾರೆ ಭಾರತೀಯರು!

    December 8, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಎಚ್ಚೆತ್ತ ರಾಜ್ಯ ಸರ್ಕಾರ

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    ಜಗತ್ತಿನ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • playboy888_ooOn on ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಿಟ್ಟಿದ್ದು ಯಾಕೆ ಗೊತ್ತಾ? | Jagadish Shettar
    • kypit kyrsovyu_rcOn on ರೇಣುಕಾಚಾರ್ಯ ಅವರಿಗೆ ಬೇಸರವಾಗಿದೆಯಂತೆ | MP Renukacharya
    • драгон мани скачать on ಕನ್ನಡದಲ್ಲಿ ಮಾತಾಡು ಅಂದಿದ್ದೇ ತಪ್ಪಾಯ್ತಾ?
    Latest Kannada News

    ಎಚ್ಚೆತ್ತ ರಾಜ್ಯ ಸರ್ಕಾರ

    December 12, 2025

    ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?

    December 12, 2025

    ಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

    December 12, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಿಎಂ ವಿಮಾನಯಾನ ಬಳಕೆಗೆ 47 ಕೋಟಿ ಖರ್ಚು #varthachakra #siddaramaiah #helicopter #airtravel #costs #news
    Subscribe